IPL ಪ್ರಸಾರದ ಹರಾಜು – ಪ್ರತಿ ಪಂದ್ಯಕ್ಕೆ 105.5 ಕೋಟಿ ರೂ ಪಡೆಯಲಿದೆ BCCI
2023 ರಿಂದ 2027 ರವರೆಗೆ ನಡೆಯು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಐದು ಸೀಸನ್‌ಗಳಿಗೆ ಮಾಧ್ಯಮ ಹಕ್ಕುಗಳ ಹರಾಜು ನಡೆಯುತ್ತಿದೆ. ಹರಾಜಿನ ಎರಡನೇ ದಿನವಾದ ಇಂದು ಭಾರತದ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನ ಆರಂಭಿಕ ಹಂತದಲ್ಲಿ ಮಾರಾಟ ಮಾಡಲಾಗಿದೆ.
ಮೂಲಗಳ ಪ್ರಕಾರ ಟಿವಿ ರೈಟ್ಸ್ ಪ್ರತಿ ಪಂದ್ಯಕ್ಕೆ 57 ಕೋಟಿ ಹಾಗೂ ಡಿಜಿಟಲ್ ರೈಟ್ಸ್ ಪ್ರತಿ ಪಂದ್ಯಕ್ಕೆ 48 ಕೋಟಿ ರೂ.ಗೆ ಮಾರಾಟವಾಗಿದೆ. ಒಟ್ಟು ಬಿಡ್ 43,255 ಕೋಟಿಗಳು. ಟಿವಿ ಪ್ಯಾಕೇಜ್ ಅನ್ನು 23,575 ಕೋಟಿ ರೂಪಾಯಿಗಳಿಗೆ ಮತ್ತು ಡಿಜಿಟಲ್ ಪ್ಯಾಕೇಜ್ ಅನ್ನು 19,680 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ.
ಟಿ ವಿ ರೈಟ್ಸ್ ಖರೀದಿಸಿದ ಕಂಪನಿಗಳ ಹೆಸರನ್ನ ಇದುವರೆಗೆ ಬಹಿರಂಗಪಡಿಸಲಾಗಿಲ್ಲ. ಈ ಹಿಂದೆ ಸ್ಟಾರ್, ಟಿವಿ ಮತ್ತು ಡಿಜಿಟಲ್ ರೈಟ್ಸ್ ಎರಡನ್ನೂ 16,348 ಕೋಟಿಗೆ ಖರೀದಿಸಿದ್ದರು. ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಟಿವಿ ಮತ್ತು ಡಿಜಿಟಲ್ ಹಕ್ಕುಗಳು ಎರಡೂವರೆ ಪಟ್ಟು ಹೆಚ್ಚು ಮೌಲ್ಯಕ್ಕೆ ಬಿಡ್ ಆಗಿವೆ.
ಪ್ರತಿ ಪಂದ್ಯಕ್ಕೆ 105.5 ಕೋಟಿ ರೂ…
ಇದೀಗ ಐಪಿಎಲ್ ಪಂದ್ಯವೊಂದಕ್ಕೆ ಬಿಸಿಸಿಐ 105.5 ಕೋಟಿ ರೂಪಾಯಿ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಪಂದ್ಯವೊಂದರ ಪ್ರಸಾರ ಹಕ್ಕಿನ ಪ್ರಕಾರ ಐಪಿಎಲ್ ಈಗ ವಿಶ್ವದ ಎರಡನೇ ಅತ್ಯಂತ ದುಬಾರಿ ಲೀಗ್ ಎನಿಸಿಕೊಂಡಿದೆ. ಅಮೆರಿಕದ ನ್ಯಾಷನಲ್ ಫುಟ್ ಬಾಲ್ ಲೀಗ್ (ಎನ್ ಎಫ್ ಎಲ್) ಮಾತ್ರ ಇದಕ್ಕಿಂತ ಹೆಚ್ಚಿನ ಹಣ ಪಡೆಯುತ್ತಿದೆ. NFL ಪ್ರತಿ ಪಂದ್ಯದ ಪ್ರಸಾರ ಹಕ್ಕುಗಳಿಗಾಗಿ 133 ಕೋಟಿ ರೂಪಾಯಿಗಳನ್ನು ಪಡೆಯುತ್ತದೆ.