13ನೇ ಆವೃತ್ತಿಯ ಐಪಿಎಲ್ ನಲ್ಲಿ ಪ್ರೇಕ್ಷಕರಿಗೆ ಅವಕಾಶ ?
ಕೋವಿಡ್-19 ಸೋಂಕಿನ ಭೀತಿಯ ನಡುವೆಯೂ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಸಿದ್ಧಗೊಳ್ಳುತ್ತಿದೆ. ಈಗ ಏನಿದ್ರೂ ಭಾರತ ಸರ್ಕಾರದ ಅನುಮತಿಗಾಗಿ ಕಾಯುತ್ತಿದೆ. ಆಗಸ್ಟ್ 2ರಂದು ನಡೆಯಲಿರುವ ಐಪಿಎಲ್ ಆಡಳಿತ ಸಭೆಯಲ್ಲಿ ಟೂರ್ನಿಯ ಅಂತಿಮ ವೇಳಾಪಟ್ಟಿ ಮತ್ತು ಕೋವಿಡ್-19 ಮಾರ್ಗಸೂಚಿ, ಶಿಷ್ಟಚಾರಗಳು ಹಾಗೂ ಸ್ಟ್ಯಾಂಡರ್ಡ್ ಆಪರೇಷನ್ ಪ್ರೋಸಿಜರ್ ಬಿಡುಗಡೆಗೊಳ್ಳಲಿದೆ.
ಈ ನಡುವೆ ಯುಎಇ 30ರಿಂದ 50ರಷ್ಟು ಪ್ರೇಕ್ಷಕರಿಗೆ ಮೈದಾನದಲ್ಲಿ ಪಂದ್ಯ ನೋಡಲು ಅವಕಾಶ ನೀಡುವ ಬಗ್ಗೆಯೂ ಚಿಂತನೆ ನಡೆಸುತ್ತಿದೆ. ಯುಎಇನಲ್ಲಿ ಕೋವಿಡ್ ಸೋಂಕು ಅಷ್ಟೇನೂ ಹೇರಳವಾಗಿ ಹರಡಿಲ್ಲ. ಕೇವಲ ಆರು ಸಾವಿರಕ್ಕಿಂತ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಭಾರತ ಸರ್ಕಾರ ಅನುಮತಿ ನೀಡಿದ್ರೆ ನಾವು ಯುಎಇ ಸರ್ಕಾರಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡುವಂತೆ ಮನವಿ ಮಾಡಬಹುದು ಎಂದು ಯುಎಇ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮುಬಾಶೀರ್ ಉಸ್ಮಾನಿ ಹೇಳಿದ್ದಾರೆ.
ತಾತ್ಕಾಲಿಕವಾಗಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿವೆ. ಈ ಹಿಂದೆಯೇ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಅವರು ಐಪಿಎಲ್ ಟೂರ್ನಿಯಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಯುಎಇ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.
ಬಿಸಿಸಿಐ ಅಂತಿಮ ನಿರ್ಧಾರವನ್ನು ತೆಗೆದುಕೊಂಡ ನಂತರ ನಾವು ಯುಎಇ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು. ಬಿಸಿಸಿಐ ಸಿದ್ಧಪಡಿಸುವ 13ನೇ ಆವೃತ್ತಿಯ ಸಂಪೂರ್ಣ ಪ್ರಸ್ತಾವಣೆ ಮತ್ತು ಎಸ್‍ಒಪಿಗಳನ್ನು ಯುಎಇ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಇಲ್ಲಿನ ಕ್ರಿಕೆಟ್ ಅಭಿಮಾನಿಗಳು ಈ ಪ್ರತಿಷ್ಠಿತ ಟೂರ್ನಿಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆಯಲ್ಲಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಯುಎಇ ಸರ್ಕಾರ ಅನುಮತಿ ನೀಡಬಹುದು ಎಂಬ ವಿಶ್ವಾಸವಿದೆ ಎಂದು ಉಸ್ಮಾನಿ ತಿಳಿಸಿದ್ದಾರೆ.
ಈ ನಡುವೆ ದುಬೈನಲ್ಲಿ ನಡೆಯಬೇಕಿದ್ದ ದುಬೈ ರಗ್ಬಿ -7 ಟೂರ್ನಿಯನ್ನು ರದ್ದುಗೊಳಿಸಲಾಗಿದೆ. ಇದು ನವೆಂಬರ್ ನಲ್ಲಿ ನಡೆಯಬೇಕಿತ್ತು. 1970ರಿಂದ ನಡೆಯುತ್ತಿದ್ದ ಈ ಸ್ಪರ್ಧೆ ಕೋವಿಡ್-19ನಿಂದಾಗಿ ಮೊದಲ ಬಾರಿ ರದ್ದುಗೊಂಡಿದೆ.
ಇನ್ನು ಐಪಿಎಲ್ ಫ್ರಾಂಚೈಸಿಗಳು ಮೂರು -ನಾಲ್ಕು ವಾರಗಳ ಮುಂಚಿತವಾಗಿಯೇ ಇಲ್ಲಿಗೆ ಆಗಮಿಸಲಿವೆ. ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವುದರಿಂದ ಅವರಿಗೆ ಅಲ್ಲಿ ತರಬೇತಿ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಇಲ್ಲಿಯೇ ಅವರು ತರಬೇತಿ ನಡೆಸಬೇಕಾಗುತ್ತದೆ. ಯುಎಇ ಟೂರ್ನಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಿದೆ. ಅಗತ್ಯ ಬಿದ್ದಾಗ ಖಾಸಗಿ ಸಂಸ್ಥೆಗಳಿಂದ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತೇವೆ. ಕಳೆದ ವರ್ಷ ಯುಎಇ, ಐಸಿಸಿ ಟ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾಪಂದ್ಯಗಳನ್ನು ಆಯೋಜನೆ ಮಾಡಿತ್ತು. ಇದ್ರಲ್ಲಿ 14 ತಂಡಗಳು ಭಾಗವಹಿಸಿದ್ದವು ಎಂದು ಉಸ್ಮಾನಿ ತಿಳಿಸಿದ್ದಾರೆ.
ಹಾಗಂತ ಯುಎಇ ಇದೇ ಮೊದಲ ಬಾರಿ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುತ್ತಿಲ್ಲ. 2014ರ ಐಪಿಎಲ್ ಟೂರ್ನಿಯನ್ನು ಯುಎಇ ಆಯೋಜನೆ ಮಾಡಿತ್ತು. ಇದು ಯುಎಇ ಆರ್ಥಿಕತೆಗೆ ಹೆಚ್ಚಿನ ಸಹಾಯವನ್ನು ನೀಡಿತ್ತು. ಅದೇ ರೀತಿ ಈ ಬಾರಿಯ ಟೂರ್ನಿ ಕೂಡ ಹೆಚ್ಚು ಉತ್ತೇಜನ ನೀಡಲಿದೆ ಎಂದು ಉಸ್ಮಾನಿ ಅಭಿಪ್ರಾಯಪಟ್ಟಿದ್ದಾರೆ.
Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಕೆಳಗೆ ತಿಳಿಸಲಾದ...