IPL – ಐಪಿಎಲ್ ಗೆ ಮೇಜರ್ ಸರ್ಜರಿ
ವಿಶ್ವದ ದುಬಾರಿ ಕ್ರಿಕೆಟ್ ಲೀಗ್ ಅಂದ್ರೆ ಅದು ಇಂಡಿಯನ್ ಪ್ರಿಮಿಯರ್ ಲೀಗ್.
ಕ್ರಿಕೆಟ್ ಲೋಕದಲ್ಲಿ ಅದೆಷ್ಟೋ ಟಿ 20 ಲೀಗ್ ಗಳು ನಡೆದರೂ ಐಪಿಎಲ್ ಕೊಡುವ ಕಿಕ್ ಬೇರೆಯದ್ದೇ ಆಗಿರುತ್ತದೆ.
ಇಲ್ಲಿ ರೋಷ – ವೇಷ, ಮೋಜು – ಮಸ್ತಿ, ಸೋಲು – ಗೆಲುವು ಎಲ್ಲವೂ ರಣ ರೋಚಕವಾಗಿರುತ್ತವೆ.
ಭಾರತದಲ್ಲಿ ಐಪಿಎಲ್ ಆರಂಭವಾಗಿ 15 ವರ್ಷಗಳ ಕಳೆದಿದ್ದರೂ ಇದುವರೆಗೂ ಅದರ ಕ್ರೇಜ್ ಕಡಿಮೆಯಾಗಿಲ್ಲ.
ಬದಲಿಗೆ ದಿನದಿಂದ ದಿನಕ್ಕೆ ಅದರ ಹವಾ ಜೋರಾಗುತ್ತಿದೆ.
ಈಗೀಗ ಬ್ಯಾಟ್ ಹಿಡಿಯುತ್ತಿರುವ ಗಲ್ಲಿ ಹುಡುಗರು ಸಹ ಐಪಿಎಲ್ ಅಂದ್ರೆ ನಿದ್ದೆಯಲ್ಲೂ ಎದ್ದು ನಿಲ್ಲುತ್ತಾರೆ.
ಅಷ್ಟರ ಮಟ್ಟಿಗೆ ಐಪಿಎಲ್ ಮನೆ ಮಾತಾಗಿದೆ.
ಭಾರತದಲ್ಲಿ ಐಪಿಎಲ್ ಶುರುವಾಗುತ್ತಿದೆ ಎಂದ್ರೆ ಅದು ವಿಶ್ವಕ್ರಿಕೆಟ್ ಹಬ್ಬದಂತೆ.
ಇಡೀ ಕ್ರಿಕೆಟ್ ಜಗತ್ತು ಐಪಿಎಲ್ ನತ್ತ ನೋಡುತ್ತಿರುತ್ತದೆ.
ಸಾಕಷ್ಟು ಹಿರಿಯ, ಕಿರಿಯ ಆಟಗಾರರು ಐಪಿಎಲ್ ಗಾಗಿ ಕಾಯುತ್ತಿರುತ್ತಾರೆ.
ಐಪಿಎಲ್ ಅನ್ನು ಆಯೋಜಿಸುವ ಬಿಸಿಸಿಐ ಪ್ರತಿಬಾರಿ ವಿಶೇಷತೆಯನ್ನು ನೀಡುತ್ತಿರುತ್ತದೆ.
ಅದರಂತೆ ಇದೀಗ ಐಪಿಎಲ್ ನಲ್ಲಿ ಮಹತ್ವದ ಬದಲಾವಣೆ ಮಾಡಲು ಬಿಸಿಸಿಐ ನಿರ್ಧಾರ ಮಾಡಿದೆ.
ಇದು ಇಂದು ಐಪಿಎಲ್ ಗೆ ಮೇಜರ್ ಸರ್ಜರಿ ಅಂತಾನೇ ಹೇಳಬಹುದು. ಮುಂಬರುವ ಐಪಿಎಲ್ ಸಂಪೂರ್ಣವಾಗಿ ಹಳೆಯ ಮಾದರಿಯಲ್ಲಿ ನಡೆಯಲಿದೆ ಯಂತೆ.
ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಕಟಿಸಿದ್ದಾರೆ. ಅಂದಹಾಗೆ ಗಂಗೂಲಿ ಅವರ ನಿರ್ಧಾರ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಲಿದೆ.
ಹಾಗಾದ್ರೆ ಗಂಗೂಲಿ ಹೇಳಿದ್ದೇನು ?
ಮುಂದಿನ ಐಪಿಎಲ್ ಸೀಸನ್ ಕಂಪ್ಲೀಟ್ ಬದಲಾವಣೆ ಪಡೆದುಕೊಳ್ಳಲಿದೆ.
ಕೊರೊನಾ ಸೋಂಕಿನಿಂದ ನಿಲ್ಲಿಸಲಾಗಿದ್ದ ಹೋಂ ಗ್ರೌಂಡ್ ಮ್ಯಾಚ್ ಗಳನ್ನು ಪುನರ್ ಆರಂಭಿಸಲಿದೆ.
ಅಂದ್ರೆ ಕೊರೊನಾ ಸೋಂಕಿಗೂ ಮುನ್ನಾ ಪ್ರತಿ ತಂಡವೂ ತಮ್ಮ ಸ್ವಂತ ಗ್ರೌಂಡ್ ನಲ್ಲಿ ಅರ್ಧದಷ್ಟು ಪಂದ್ಯಗಳನ್ನಾಡುತ್ತಿತ್ತು.
ಆದ್ರೆ ಕೊರೊನಾ ಸೋಂಕು ಕಾರಣ ಕೇವಲ ಮೂರ್ನಾಲ್ಕು ಮೈದಾನಗಳಲ್ಲಿ ಮಾತ್ರ ಪಂದ್ಯ ನಡೆಯುತ್ತಿತ್ತು.
ಸದ್ಯ ಕೊರೊನಾ ಸೋಂಕು ಕಡಿಮೆಯಾಗಿರುವುದರಿಂದ ಪ್ರತಿ ತಂಡ ತಮ್ಮ ಸ್ವಂತ ಮೈದಾನದಲ್ಲಿ ಒಂದು ಮ್ಯಾಚ್, ಪ್ರತ್ಯರ್ಥಿ ಮೈದಾನದಲ್ಲಿ ಮತ್ತೊಂದು ಮ್ಯಾಚ್ ಆಡಲಿದೆ.
ಸದ್ಯ ಐಪಿಎಲ್ ನಲ್ಲಿ 10 ತಂಡಗಳಿದ್ದು, ಪ್ರತಿ ತಂಡ ಉಳಿದ 9 ಟೀಂಗಳ ವಿರುದ್ಧ ಎರಡು ಪಂದ್ಯಗಳನ್ನಾಡಲಿದೆ.
2022ರ ಐಪಿಎಲ್ ಪೂರ್ತಿಯಾಗಿ ಭಾರತದಲ್ಲಿಯೇ ನಡೆದರೂ ಕೆಲವು ಮೈದಾನಗಳಿಗೆ ಮಾತ್ರ ಪಂದ್ಯಗಳು ಸೀಮಿತವಾಗಿದ್ದವು.
ಮುಂಬರುವ ಸೀಸನ್ ನಿಂದ ಎಲ್ಲವೂ ಮೊದಲಿನಂತೆ ನಡೆಯಲಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಕಡೆ 2023 ರ ಸೀಸನ್ ನೊಂದಿಗೆ ಮಹಿಳಾ ಐಪಿಎಲ್ ಅನ್ನೂ ಕೂಡ ದೊಡ್ಡ ಮಟ್ಟದಲ್ಲಿ ನಿರ್ವಹಿಸಲಿದ್ದೇವೆ, ಇದು ಹೊಸ ಪ್ರತಿಭೆಗಳಿಗೆ ದೊಡ್ಡ ಅವಕಾಶವಾಗಿರುತ್ತದೆ ಎಂದು ಹೇಳಿದ್ದಾರೆ.