ಹಿಟ್ ಮ್ಯಾಚ್ ರೋಹಿತ್ ಶರ್ಮಾಗೆ ಕೆಟ್ಟ ದಾಖಲೆ..!!
ಐಪಿಎಲ್ 2022 ರ ಸೀಸನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ ಕಹಿ ಅನುಭವವನ್ನು ನೀಡಿದೆ.
ರೋಹಿತ್ ಈ ಬಾರಿಯ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದಿದ್ದಾರೆ.
ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಸತತ ಎಂಟು ಪಂದ್ಯಗಳನ್ನು ಸೋತು ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೂ ಸೀಸನ್ ನಲ್ಲಿ ಒಟ್ಟಾರೆ 14 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಬಳಗ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
ಇದರೊಂದಿಗೆ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿದ್ದು ಟೂರ್ನಿಯನ್ನು ಮುಗಿಸಿದೆ. ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಮುಂಬೈ ಇಂತಹ ದಯನೀಯ ಪರಿಸ್ಥಿತಿಯಲ್ಲಿ ಟೂರ್ನಿಯನ್ನ ಮುಗಿಸಿದೆ.
ವೈಯುಕ್ತಿಕವಾಗಿಯೂ ರೋಹಿತ್ ಶರ್ಮಾ ಈ ಆವೃತ್ತಿಯಲ್ಲಿ ಹಲವು ಕೆಟ್ಟ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ದೆಹಲಿ ವಿರುದ್ಧದ ಪಂದ್ಯದಲ್ಲಿ ಹಿಟ್ಮ್ಯಾನ್ ಕಳಪೆ ಪ್ರದರ್ಶನವನ್ನು ಮುಂದುವರೆಸಿದರು. 13 ಎಸೆತಗಳಲ್ಲಿ ಕೇವಲ 2 ರನ್ ಮಾತ್ರ ಗಳಿಸಿ ಔಟ್ ಆದರು.
ಅವರು ಈ ಋತುವಿನಲ್ಲಿ ಆಡಿದ 14 ಇನ್ನಿಂಗ್ಸ್ಗಳಲ್ಲಿ ಕನಿಷ್ಠ ಒಂದು ಅರ್ಧ ಶತಕವನ್ನು ಗಳಿಸದೆ ಕೇವಲ 268 ರನ್ ಗಳಿಸಿದ್ದಾರೆ. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ರೋಹಿತ್ ಈ ರೀತಿಯ ಕೆಟ್ಟ ದಾಖಲೆಯನ್ನು ಹೊಂದಿರಲಿಲ್ಲ. ipl-rohit-sharma-worst-batting-record