IPL 2022 | ಕ್ರಿಕೆಟ್ ಹಬ್ಬ ಇನ್ನೊಂದೇ ದಿನ ಬಾಕಿ… ಈ ಸಲ ಕಪ್ ಯಾರದ್ದು…?
ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಹಬ್ಬಕ್ಕೆ ಇನ್ನೊಂದೇ ದಿನ ಬಾಕಿ ಉಳಿದಿದೆ.
ಐಪಿಎಲ್ ಫ್ರಾಂಚೈಸಿಗಳ ಜೊತೆಗೆ ತಂಡಗಳ ಅಭಿಮಾನಿಗಳು ಕೂಡ ಕ್ರಿಕೆಟ್ ದಿವಾಳಿಗೆ ಕಾದು ಕುಳಿತಿದ್ದಾರೆ.
ನಾಳೆ ಸಂಜೆ 15ನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಗಲಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ರನ್ನರ್ ಅಪ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪ್ರತಿ ಬಾರಿಯಂತೆ ಶನಿವಾರ ಮತ್ತು ಭಾನುವಾರ 12 ಡಬಲ್ ಹೆಡರ್ ಪಂದ್ಯಗಳಿರಲಿವೆ.
ಡಬಲ್ ಹೆಡರ್ ದಿನ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ನಡೆದರೆ, 2ನೇ ಪಂದ್ಯ 7.30ಕ್ಕೆ ಆರಂಭವಾಗಲಿದೆ.
ಒಂದೇ ಪಂದ್ಯ ಇರುವ ದಿನ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್ನಲ್ಲಿ 10 ತಂಡಗಳಿದ್ದು, 2 ಗುಂಪುಗಳಾಗಿ ವಿಂಗಡಿಸಲಾಗಿದೆ.
ಪ್ರತೀ ತಂಡಕ್ಕೂ 14 ಲೀಗ್ ಪಂದ್ಯಗಳು ಇರಲಿದೆ. ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿವೆ.
ಮಾರ್ಚ್ 26 ರಿಂದ ಮೇ 22 ರ ತನಕ ಒಟ್ಟು 65 ದಿನ ಐಪಿಎಲ್ ಲೀಗ್ ಪಂದ್ಯಗಳು ನಡೆಯಲಿವೆ.
ಇನ್ನು ಈ ಬಾರಿಯ ಐಪಿಎಲ್ ಹಲವು ಹೊಸತನಗಳಿಗೆ ಸಾಕ್ಷಿಯಾಗಿದೆ.
ಈ ಹಿಂದೆ ತಂಡವನ್ನ ಮುನ್ನಡೆಸಿದ್ದವರು ತಂಡದಲ್ಲಿ ಸಾಮಾನ್ಯ ಆಟಗಾರರಾಗಿದ್ದಾರೆ.
ತಂಡದ ಸಾಮಾನ್ಯ ಆಟಗಾರರಾಗಿದ್ದವರು ತಂಡಗಳ ನಾಯಕರಾಗಿದ್ದಾರೆ.
15 ನೇ ಆವೃತ್ತಿಯ ಐಪಿಎಲ್ ಹಂಗಾಮ 65 ದಿನಗಳ ಕಾಲ ನಡೆಯಲಿದ್ದು, ಪ್ರತಿ ದಿನ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ.
IPL Schedule 2022 Match Dates & Fixtures