ಕ್ರೀಡಾಭಿಮಾನಿಗಳೇ ಗಮನಿಸಿ :’IPL-2021” ಪಂದ್ಯಾವಳಿ ರದ್ದು
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿನ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2021ರ ಐಪಿಎಲ್ ಪಂದ್ಯಾವಳಿಯನ್ನು ಬಿಸಿಸಿಐ ರದ್ದುಪಡಿಸಿದೆ.
ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಆಟಗಾರರಿಗೂ ಸೋಂಕು ವಕ್ಕರಿಸುತ್ತಿರುವ ಕಾರಣ ಐಪಿಎಲ್ 2021 ಪಂದ್ಯಾವಳಿಯನ್ನ ರದ್ದುಪಡಿಸಲಾಗಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.
ಕೆಕೆಆರ್ ನ ಇಬ್ಬರು ಆಟಗಾರರಿಗೆ ಹಾಗೂ ಚೆನ್ನೈ ತಂಡದ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಕೆಕೆಆರ್ ಮತ್ತು ಆರ್ ಸಿಬಿ ಹಾಗೂ ಚೆನ್ನೈ ಮತ್ತು ಆರ್ ಆರ್ ನಡುವಿನ ಪಂದ್ಯಗಳನ್ನು ಮುಂದೂಡಿಕೆ ಮಾಡಲಾಗಿತ್ತು. ಆದ್ರೆ ಇದೀಗ ಸೋಂಕು ಹೆಚ್ಚುತ್ತಿರುವ ಕಾರಣ 2021ರ ಐಪಿಎಲ್ ಪಂದ್ಯಾವಳಿಯನ್ನ ಬಿಸಿಸಿಐ ರದ್ದು ಮಾಡಿದೆ.