ಬೆಂಗಳೂರು : ಇದೇ ಮೊದಲ ಬಾರಿಗೆ ಫುಟ್ಬಾಲ್ ಲೀಗ್ ಗಳಲ್ಲಿದ್ದ ಆಟಗಾರರ ವಿನಿಮಯ ಪದ್ದತಿಯನ್ನು ಕ್ರಿಕೆಟ್ ( IPL2020 )ನಲ್ಲೂ ಪರಿಚಯಿಸಲಾಗಿದೆ. ಅಂದರೆ ಆವೃತ್ತಿಯೊಂದರ ಮಧ್ಯದಲ್ಲಿ ತಂಡಗಳಿಗೆ ಆಟಗಾರರನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ. ಐಪಿಎಲ್ ( IPL2020 ) ಟೂರ್ನಿಯಲ್ಲಿನ ಸ್ಪರ್ಧೆಯನ್ನು ಮತ್ತಷ್ಟು ಹೆಚ್ಚಿಸಲು ಇಂಥದ್ದೊಂದು ಹೊಸ ಪ್ರಯೋಗವನ್ನು ಮಾಡಲಾಗಿದೆ.
ಸದ್ಯ ಟೂರ್ನಿಯಲ್ಲಿರುವ ಎಲ್ಲಾ ತಂಡಗಳು ತಲಾ 7 ಲೀಗ್ ಪಂದ್ಯಗಳನ್ನು ಆಡಿದ ಬಳಿಕ ಆಟಗಾರರ ಹಂಚಿಕೆಗೆ ಅವಕಾಶ ಲಭ್ಯವಾಗಲಿದೆ. ಇದರೊಂದಿಗೆ ಟೂರ್ನಿಯ ಮಧ್ಯಂತರದ ಬಳಿಕ ಆಟಗಾರರಿಗೆ ಹೊಸ ಫ್ರಾಂಚೈಸಿಯಲ್ಲಿ ಮಿಂಚುವ ಅವಕಾಶ ಸಿಗಲಿದೆ.
ಹಾಗಾದ್ರೆ ಯಾವ ತಂಡದಲ್ಲಿ ಯಾವ ಆಟಗಾರರು ಈ ವಿನಿಮಯಕ್ಕೆ ಅರ್ಹರಾಗಿದ್ದಾರೆ. ಅದನ್ನೋದನ್ನ ನೋಡೋದಾದ್ರೆ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಆಡಮ್ ಝಾಂಪ, ಗುರುಕೀರತ್ ಸಿಂಗ್ ಮಾನ್, ಮೊಯೀನ್ ಅಲಿ, ಮೊಹಮ್ಮದ್ ಸಿರಾಜ್, ಪಾರ್ಥಿವ್ ಪಟೇಲ್, ಜಾಶ್ ಫಿಲಿಪ್, ಕ್ರಿಸ್ ಮಾರಿಸ್, ಡೇಲ್ ಸ್ಟೇನ್, ಪವನ್ ನೇಗಿ, ಉಮೇಶ್ ಯಾದವ್.
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಅಜಿಂಕ್ಯ ರಹಾನೆ, ಹರ್ಷಲ್ ಪಟೇಲ್, ಇಶಾಂತ್ ಶರ್ಮಾ, ಕೀಮೋ ಪೌಲ್, ಸಂದೀಪ್ ಲಮಿಚಾನೆ, ಅಲೆಕ್ಸ್ ಕೇರಿ, ಅವೇಶ್ ಖಾನ್, ಲಲಿತ್ ಯಾದವ್, ಡೇನಿಯಲ್ ಸ್ಯಾಮ್ಸ್, ತುಷಾರ್ ದೇಶಪಾಂಡೆ, ಮೋಹಿತ್ ಶರ್ಮಾ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಿಚೆಲ್ ಮೆಕ್ಲೆನಗನ್, ಕ್ರಿಸ್ ಲಿನ್, ನೇಥನ್ ಕೌಲ್ಟರ್-ನೈಲ್, ಸೌರಭ್ ತಿವಾರಿ, ಧವಳ್ ಕುಲಕರ್ಣಿ, ಜಯಂತ್ ಯಾದವ್, ಆದಿತ್ಯ ತಾರೆ, ಅನುಕುಲ್ ರಾಯ್, ಮೊಹ್ಸಿನ್ ಖಾನ್, ದಿಗ್ವಿಜಯ್ ದೇಶ್ಮುಖ್, ಪ್ರಿನ್ಸ್ ಬಲ್ವಂತ್ ರಾಯ್, ಶೆರ್ಫೇನ್ ರುದರ್ಫೋರ್ಡ್, ಅನ್ಮೊಲ್ಪ್ರೀತ್ ಸಿಂಗ್.
ಇದನ್ನೂ ಓದಿ : ಮತ್ತಷ್ಟು ರೋಚಕವಾಗಲಿದೆ ಐಪಿಎಲ್ : ಆಟಗಾರರ ವಿನಿಮಯಕ್ಕೆ ಆರ್ ಸಿಬಿ ಸಿದ್ಧ
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇಮ್ರಾನ್ ತಾಹಿರ್, ಋತುರಾಜ್ ಗಾಯಕ್ವಾಡ್, ಆರ್. ಸಾಯಿ ಕಿಶೋರ್, ಜಾಶ್ ಹೇಝಲ್‍ವುಡ್ ಕೆ.ಎಂ.ಆಸಿಫ್, ನಾರಾಯಣ್ ಜಗದೀಶನ್, ಮಿಚೆಲ್ ಸ್ಯಾಂಟ್ನರ್, ಮೋನು ಕುಮಾರ್.
ಸನ್‍ರೈಸರ್ಸ್ ಹೈದರಾಬಾದ್ ತಂಡದಲ್ಲಿ ವೃದ್ಧಿಮಾನ್ ಸಹಾ, ವಿಜಯ್ ಶಂಕರ್, ಬಿಲ್ಲಿ ಸ್ಟಾನ್ಲೇಕ್, ಮೊಹಮ್ಮದ್ ನಬಿ, ವಿರಾಟ್ ಸಿಂಗ್, ಶ್ರೀವತ್ಸ ಗೋಸ್ವಾಮಿ, ಸಿದ್ಧಾರ್ಥ್ ಕೌಲ್, ಬಾವನಕ ಸಂದೀಪ್, ಫೇಬಿಯೆನ್ ಆಲೆನ್, ಸಂಜಯ್ ಯಾದವ್, ಬಸಿಲ್ ಥಂಪಿ, ಶಹಬಾಜ್ ನದೀಮ್.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್, ದೀಪಕ್ ಹೂಡ, ಇಶಾನ್ ಪೊರೆಲ್, ಪ್ರಭಸಿಮ್ರನ್ ಸಿಂಗ್, ತಜಿಂದರ್ ಸಿಂಗ್, ಅರ್ಷ್‍ದೀಪ್ ಸಿಂಗ್,ಮುಜೀಬ್ ಉರ್ ರೆಹಮಾನ್, ಮುರುಗನ್ ಅಶ್ವಿನ್, ದರ್ಶನ್ ನಲ್ಕಂಡೆ, ಕೃಷ್ಣಪ್ಪ ಗೌತಮ್, ಹಾರ್ಡಸ್ ವಿಲ್ಜೋಯೆನ್, ಹಪ್ರ್ರೀತ್ ಬ್ರಾರ್, ಜೆ ಸುಚಿತ್.
ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಟಾಮ್ ಬ್ಯಾನ್ಟನ್, ಪ್ರಸಿದ್ಧ್ ಕೃಷ್ಣ, ರಿಂಕು ಸಿಂಗ್, ಸಂದೀಪ್ ವಾರಿಯರ್, ಸಿದ್ಧೇಶ್ ಲಾಡ್, ಕ್ರಿಸ್ ಗ್ರೀನ್, ನಿಖಿಲ್ ನಾಯಕ್, ಅಲಿ ಖಾನ್, ಎಂ ಸಿದ್ಧಾರ್ಥ್, ಲಾಕಿ ಫರ್ಗುಸನ್.
ಇದನ್ನೂ ಓದಿ : ಐಪಿಎಲ್ 2020 – 25ನೇ ಪಂದ್ಯದಲ್ಲಿ ಚೆನ್ನೈ ಮತ್ತು ಬೆಂಗಳೂರು ತಂಡಗಳ ಜಟಾಪಟಿ
ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ವರುಣ್ ಆರನ್, ಮನನ್ ವೊಹ್ರಾ, ಶಶಾಂಕ್ ಸಿಂಗ್, ಡೇವಿಡ್ ಮಿಲ್ಲರ್ ಓಶೇನ್ ಥಾಮಸ್, ಅನಿರುದ್ಧಾ ಜೋಶಿ, ಆಂಡ್ರ್ಯೂ ಟೈ, ಆಕಾಶ್ ಸಿಂಗ್, ಅನುಜ್ ರಾವತ್, ಯಶಸ್ವಿ ಜೈಸ್ವಾಲ್, ಮಾಯಾಂಕ್ ಮಾಕರ್ಂಡೆ, ಅಂಕಿತ್ ರಾಜ್‍ಪೂತ್.