IRE vs IND : ಈ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ನೋ ಚಾನ್ಸ್
ಐರ್ಲೆಂಡ್ ವಿರುದ್ಧ ನಡೆಯಲಿರುವ ಎರಡು ಟಿ 20 ಪಂದ್ಯಗಳ ಸರಣಿಗೆ ಬುಧವಾರ ಬಿಸಿಸಿಐ 17 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಿದೆ.
ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ರೆ ಐಪಿಎಲ್ ನಲ್ಲಿ ಸನ್ ರೈಸರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ರಾಹುಲ್ ತ್ರಿಪಾಠಿ ಇದೇ ಮೊದಲ ಬಾರಿಗೆ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಸಂಜು ಸ್ಯಾಮ್ ಸನ್ ಕೂಡ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.
ಆದ್ರೆ ರಾಹುಲ್ ತ್ರಿಪಾಠಿ ಮತ್ತು ಸಂಜು ಸ್ಯಾಮ್ ಸನ್ ಗೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಸಿಗೋದಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಆಡುವ ಹನ್ನೊಂದರಲ್ಲಿ ಇವರಿಬ್ಬರಿಗಿಂತ ದೀಪಕ್ ಹೂಡಾ ಕಾಣಿಸಿಕೊಳ್ಳಲಿದ್ದಾರೆ ಎಂದು ವಾದಿಸಿದ್ದಾರೆ.
ಪಂತ್ ಈ ಸಿರೀಸ್ ಗೆ ದೂರವಾಗಿದ್ದಾರೆ. ಹೀಗಾಗಿ ನಾಲ್ಕನೇ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಬರ್ತಾರೆ ಅನ್ನೋ ಪ್ರಶ್ನೆ ಎದ್ದಿದೆ.
ಪಂತ್ ಸ್ಥಾನದಲ್ಲಿ ದೀಪಕ್ ಹೂಡಾ ಅರ್ಹ ಎಂದು ನಾನು ಭಾವಿಸುತ್ತೇನೆ. ಓಪನರ್ ಆಗಿ ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್ ಇದ್ದಾರೆ.
ಮೂರನೇ ಸ್ಥಾನದಲ್ಲಿ ಸೂರ್ಯ ಕುಮಾರ್ ಯಾದವ್ ಇದ್ದು, ಐದನೇ ಸ್ಥಾನದಲ್ಲಿ ಕಾಪ್ಟನ್ ಹಾರ್ದಿಕ್ ಪಾಂಡ್ಯ ಕ್ರೀಸ್ ಗೆ ಬರಲಿದ್ದಾರೆ.
ಹೀಗಾಗಿ ರಾಹುಲ್ ತ್ರಿಪಾಠಿ, ಸ್ಯಾಮ್ಸನ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳೋದು ಅನುಮಾನ. ಕೇವಲ ಎರಡು ಟಿ 20 ಪಂದ್ಯಗಳನ್ನ ಮಾತ್ರ ಭಾರತ ಆಡಲಿದೆ.
ಎರಡು ಟಿ 20 ಗಾಗಿ ತಂಡದಲ್ಲಿ ಯಾವುದೇ ಬದಲಾವಣೆಗಳು ಇರೋದಿಲ್ಲ. ಒಂದು ವೇಳೆ ಇವರಿಬ್ಬರಲ್ಲಿ ಒಬ್ಬರಿಗೆ ಸ್ಥಾನ ಸಿಕ್ಕಿ, ದೀಪಕ್ ಹೂಡಾಗೆ ಅವಕಾಶ ಸಿಗಲಿಲ್ಲ ಅಂದ್ರೆ ಆತ ತೀವ್ರ ನಿರಾಸೆ ಅನುಭವಿಸುತ್ತಾನೆ.
ಯಾಕೆಂದರೇ ಆತ ದಕ್ಷಿಣ ಆಫ್ರಿಕಾದ ಸರಣಿಗೆ ಆಯ್ಕೆಯಾಗಿದ್ದರು. ಆದ್ರೆ ಬೆಂಜ್ ಗೆ ಪರಿಮಿತವಾಗಿದ್ದಾರೆ ಎಂದು ತಿಳಿಸಿದ್ಧಾರೆ.