Ireland | ಮಹಿಳೆಯ ಹೊಟ್ಟೆಯಲ್ಲಿ 55 ಬ್ಯಾಟರಿ
66 ವರ್ಷದ ಹೊಟ್ಟೆಯಲ್ಲಿದ್ದವು 55 ಬ್ಯಾಟರಿ
ಐರ್ಲೆಂಡಿನಲ್ಲಿ ನಡೆದ ವಿಚಿತ್ರ ಘಟನೆ
ಸಿಕ್ಕ ಸಿಕ್ಕ ಬ್ಯಾಟರಿಗಳನ್ನು ನುಂಗಿದ್ದ ಮಹಿಳೆ
ಬ್ಯಾಟರಿಗಳನ್ನು ನೋಡಿ ದಂಗಾಗಿದ್ದ ವೈದ್ಯರು
ಡಬ್ಲಿನ್ : ಐರ್ಲೆಂಡ್ ನಲ್ಲಿ ವೈದ್ಯರು 66 ವರ್ಷದ ಮಹಿಳೆಯ ಹೊಟ್ಟೆಯಲ್ಲಿ 55 ಬ್ಯಾಟರಿಗಳನ್ನು ಹೊರತೆಗೆದಿದ್ದಾರೆ.
ಮಹಿಳೆ ಉದ್ದೇಶಪೂರ್ವಕವಾಗಿ ತನ್ನನ್ನು ತಾನು ಘಾಸಿಗೊಳಿಸುವ ಉದ್ದೇಶದಿಂದ ಸಿಕ್ಕ ಸಿಕ್ಕ ಬ್ಯಾಟರಿಗಳನ್ನು ನುಂಗಿದ್ದಾರೆ ಎಂದು ವರದಿಯಾಗಿದೆ.
ಆಕೆ ಆಸ್ಪತ್ರೆಗೆ ದಾಖಲಾದ ಬಳಿಕ ಆಕೆಯ ಹೊಟ್ಟೆಯ ಭಾಗದ ಎಕ್ಸ್ ರೇ ಪರೀಕ್ಷೆಯ ವೇಳೆ ಹೊಟ್ಟೆಯಲ್ಲಿ ಹಲವು ಬ್ಯಾಟರಿಗಳನ್ನು ಕಂಡು ವೈದ್ಯರು ದಂಗಾಗಿದ್ದಾರೆ.
ಬಳಿಕ ಶಸ್ತ್ರಚಿಕಿತ್ಸೆ ನಡೆಸಿ, ಎಲ್ಲಾ ಬ್ಯಾಟರಿಗಳನ್ನು ತೆಗೆದುಹಾಕಿದ್ದಾರೆ.
ಶಸ್ತ್ರಚಿಕಿತ್ಸೆಯಲ್ಲಿ ಒಟ್ಟು 55 ಬ್ಯಾಟರಿಗಳನ್ನು ತೆಗೆದಿದ್ದು, ಇದೇ ಮೊದಲು ಎಂದು ವೈದ್ಯರು ತಿಳಿಸಿದ್ದಾರೆ.
ಅಂದಹಾಗೆ ಹೊಟ್ಟೆಯಲ್ಲಿದ್ದ ಬ್ಯಾಟರಿಗಳು ಆಕೆಯ ಜೀರ್ಣಕ್ರಿಯೆಗೆ ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ ಎಂದು ಕೂಡ ವೈದ್ಯರು ಸ್ಪಷ್ಟಪಡಿಸಿದ್ದಾರೆ.