ireland-vs-india | ಭಾರತ – ಐರ್ಲೆಂಡ್ ಮ್ಯಾಚ್ | ಒಂಭತ್ತು ದಾಖಲೆಗಳು
ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಇಂದು ಐರ್ಲೆಂಡ್ ವಿರುದ್ಧದ ಟಿ 20 ಸರಣಿಯ ಭಾಗವಾಗಿ ಮೊದಲ ಪಂದ್ಯವನ್ನಾಡಲಿದೆ.
ಡಬ್ಲಿನ್ ವೇದಿಕೆಯಾಗಿ ನಡೆಯಲಿರುವ ಈ ಸರಣಿಯ ಎರಡು ಪಂದ್ಯಗಳು ಭಾರತದ ಕಾಲ ಮಾನದ ಪ್ರಕಾರ ರಾತ್ರಿ 9 ಗಂಟೆಗೆ ಪ್ರಾರಂಭವಾಗಲಿದೆ.
ಈ ಮೊದಲ ಟಿ 20 ಮ್ಯಾಚ್ ನಲ್ಲಿ ಒಂಭತ್ತು ದಾಖಲೆಗಳು ಸೃಷ್ಠಿಯಾಗುವ ಸಾಧ್ಯತೆಗಳಿವೆ.
ಐರ್ಲೆಂಡ್ ಬೌಲರ್ ಆಂಡಿ ಮೆಕ್ಬ್ರಿನ್ ಅಂತಾರಾಷ್ಟ್ರೀಯ ಟಿ20ಯಲ್ಲಿ 100 ವಿಕೆಟ್ಗಳ ಗಡಿಯನ್ನು ತಲುಪಲು ಇನ್ನೂ ಎರಡು ವಿಕೆಟ್ ಗಳು ಬೇಕು.
ಕ್ರೇಗ್ ಯಂಗ್ ಕೂಡ 50 ವಿಕೆಟ್ ಮೈಲುಗಲ್ಲನ್ನು ತಲುಪಲು ಕೇವಲ ಎರಡು ವಿಕೆಟ್ಗಳ ಅಂತರದಲ್ಲಿದ್ದಾರೆ.
ಐರ್ಲೆಂಡ್ ಮತ್ತು ಟೀಂ ಇಂಡಿಯಾ ನಡುವಿನ ಮೂರು ಟಿ20ಐ ಪಂದ್ಯಗಳಲ್ಲಿ ಭಾರತವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿದೆ.
ಟೀಂ ಇಂಡಿಯಾದ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಇನ್ನೂ ನಾಲ್ಕು ವಿಕೆಟ್ ಕಬಳಿಸಿದ್ರೆ ಟೀಮ್ ಇಂಡಿಯಾ ಪರ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಇಶಾನ್ ಕಿಶನ್ ಐದು ರನ್.. ಟೀಂ ಇಂಡಿಯಾ ಹಿರಿಯ ದಿನೇಶ್ ಕಾರ್ತಿಕ್ 9 ರನ್ ಗಳನ್ನು ಗಳಿಸಿದ್ರೆ ಟಿ 20 ಕ್ರಿಕೆಟ್ ನಲ್ಲಿ 500 ರನ್ ಪೂರ್ತಿ ಮಾಡಲಿದ್ದಾರೆ.
ಐರ್ಲೆಂಡ್ ನ ಸ್ಟಾರ್ ಆಟಗಾರ ಪಾಲ್ ಸ್ಟಿರ್ಲಿಂಗ್ ಇನ್ನೂ ನಾಲ್ಕು ಸಿಕ್ಸರ್ ಬಾರಿಸಿದರೆ, ಐರ್ಲೆಂಡ್ ಪರ ಟಿ20ಯಲ್ಲಿ 100 ಸಿಕ್ಸರ್ ಬಾರಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಇತಿಹಾಸ ನಿರ್ಮಿಸಲಿದ್ದಾರೆ.
ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ಒಂಬತ್ತನೇ ಆಟಗಾರ. ಪಾಂಡ್ಯ ಅವರಿಗಿಂತ ಮೊದಲು ಸೆಹ್ವಾಗ್, ಎಂಎಸ್ ಧೋನಿ, ಸುರೇಶ್ ರೈನಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ರಿಷಬ್ ಪಂತ್ ಟಿ20ಯಲ್ಲಿ ತಂಡದ ನಾಯಕರಾಗಿದ್ದರು.
2022ರಲ್ಲಿ ಐವರು ನಾಯಕರನ್ನು ಟೀಂ ಇಂಡಿಯಾ ಕಂಡಿದೆ. ಈ ವರ್ಷ ಕೊಹ್ಲಿ, ಕೆಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್.. ಇದೀಗ ಪಾಂಡ್ಯ ಐದನೇ ನಾಯಕರಾಗಲಿದ್ದಾರೆ.
ಡಬ್ಲಿನ್ ಮೈದಾನದಲ್ಲಿ ಟೀಂ ಇಂಡಿಯಾ ಉತ್ತಮ ದಾಖಲೆ ಹೊಂದಿದೆ. ಇಲ್ಲಿ ನಡೆದ ಹಿಂದಿನ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ 143 ರನ್ ಗಳ ಭರ್ಜರಿ ಜಯ ಸಾಧಿಸಿತ್ತು.
380- ಐರ್ಲೆಂಡ್ ವಿರುದ್ಧದ ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಸ್ಟ್ರೈಕ್. 2018ರಲ್ಲಿ ಪಾಂಡ್ಯ ಆಡಿದ ಎರಡು ಪಂದ್ಯಗಳಲ್ಲಿ ಅವರು ಔಟಾಗದೆ 6 (1 ಎಸೆತ) ಮತ್ತು 32 (9 ಎಸೆತ) ಗಳಿಸಿದ್ದರು.