Irfan Pathan | ಇರ್ಫಾನ್ ತಂಡದಲ್ಲಿ ಡಿಕೆಗೆ ಚಾನ್ಸ್.. ಪಂತ್ ಗೆ ನೋ ಚಾನ್ಸ್
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2022ಕ್ಕೆ ಇನ್ನು ಕೆಲವು ತಿಂಗಳು ಬಾಕಿ ಉಳಿದಿವೆ. ಆದ್ರೂ ಕ್ರಿಕೆಟ್ ನಿಪುಣರು, ಹಿರಿಯ ಕ್ರಿಕೆಟ್ ಆಟಗಾರರು ತಮ್ಮ ನಿರೀಕ್ಷೆಗಳನ್ನು ಹೊರಹಾಕುತ್ತಿದ್ದಾರೆ.
ಅದರಂತೆ ಟಿ 20 ವಿಶ್ವಕಪ್ ಗೆ ಭಾರತ ತಂಡದಲ್ಲಿ ಯಾರ್ ಯಾರು ಸ್ಥಾನ ಪಡೆಯಲಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ತಮ್ಮ ತಂಡವನ್ನು ಪ್ರಕಟಿಸಿದ್ದಾರೆ.
ಈ ತಂಡದಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಬದಲಾಗಿ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಗಿದೆ.
ಇರ್ಫಾನ್ ತಂಡದಲ್ಲಿ ಕೆ.ಎಲ್.ರಾಹುಲ್ ಮತ್ತು ರೋಹಿತ್ ಶರ್ಮಾ ಓಪನರ್ ಗಳಾಗಿದ್ದಾರೆ. ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಇದ್ದಾರೆ.

ಇನ್ನು ಐದನೇ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ, ಫಿನಿಷರ್ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಲಾಗಿದೆ.
ಇನ್ನು ತಮ್ಮ ತಂಡದಲ್ಲಿ ಫುಲ್ ಟೈಂ ಆಲ್ ರೌಂಡರ್ ಆಗಿ ರವೀಂದ್ರ ಜಡೇಜಾ ಅವರಿಗೆ ಚಾನ್ಸ್ ನೀಡಲಾಗಿದೆ. ಸ್ಪೆಷಲಿಸ್ಟ್ ಸ್ಪಿನ್ನರ್ ಗಳ ಕೋಟಾದಲ್ಲಿ ಚಹಾಲ್ ಗೆ ಮಾತ್ರ ಅವಕಾಶ ನೀಡಲಾಗಿದೆ.
ವೇಗಿಗಳ ವಿಭಾಗದಲ್ಲಿ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಗೆ ಚಾನ್ಸ್ ನೀಡಲಾಗಿದೆ.
ಅಂದಹಾಗೆ ಇರ್ಫಾನ್ ಪ್ರಕಟಿಸಿರುವ ತಂಡದಲ್ಲಿ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಮೊಹ್ಮದ್ ಶಮಿ ಕಾಣಿಸಿಕೊಂಡಿಲ್ಲ.
ಟಿ20 ವಿಶ್ವಕಪ್‌ಗೆ ಇರ್ಫಾನ್ ಪಠಾಣ್ ಆಯ್ಕೆ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ