Yash-Prabhas : ‘ಸಲಾರ್’ ಅಡ್ಡಾದಲ್ಲಿ ಇರಲಿದೆಯಯಂತೆ ರಾಕಿ ಭಾಯ್ ಎಂಟ್ರಿ..
ಬಾಹುಬಲಿ ಮೂಲಕ ಪ್ರಭಾಸ್… ಕೆಜಿಎಫ್ ಮೂಲಕ ಯಶ್.. ಪ್ಯಾನ್ ಇಂಡಿಯಾ ಸ್ಟಾರ್ ಆದಂತಹ ನಟರು. ಸಲಾರ್ ಚಿತ್ರ ಶುರುವಾದಾನಿಂದಲೂ ಇಂದೊಂದು ಮಲ್ಟಿವರ್ಸ್ ಸಿನಿಮಾವಾಗಲಿದೆ ದು ಕೆಜೆಎಫ್ ನ ಮುಂದುವರೆದ ಭಾಗ ಎನ್ನುವುದು ಕೇಳಿ ಬರುತ್ತಿತ್ತು. ಅದಕ್ಕೆ ತಕ್ಕಂತೆ ಹೊಸ ಗಾಸಿಪ್ ಒಂದು ಎರಡೂ ಸಿನಿ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ.
ಕೆಜಿಎಫ್ ಪ್ರಶಾಂತ್ ನೀಲ್ ಇದೀಗ ಪ್ರಭಾಸ್ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇವೆರೆಡೂ ಸಿನಿಮಾಗಳಿಗೂ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿರುವುದು ಕೂಡ ಗೊತ್ತಿದೆ.. KGF ಹವಾ ಎಬ್ಬಿಸಾಗಿದೆ.. ಈಗ ಸಲಾರ್ ಸರದಿ..
ಅಂದ್ಹಾಗೆ ಸಲಾರ್ ಸಿನಿಮಾದ ಬಗ್ಗೆ ಹೀಗೊಂದು ಅಪ್ ಡೇಟ್ ಕೇವಲ ಸ್ಯಾಂಡಲ್ ವುಡ್ , ಟಾಲಿವುಡ್ ಅಷ್ಟೇ ಅಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡಿದೆ.. ಅಂದ್ಹಾಗೆ ಪ್ರಭಾಸ್ ಅವರ ಸಲಾರ್ ಸಿನಿಮಾದಲ್ಲಿ ರಾಕಿ ಭಾಯ್ ಎಂಟ್ರಿಯಾಗಲಿದ್ಯಂತೆ.
ಸಲಾರ್ ಸಿನಿಮಾದಲ್ಲಿ ನಟ ಯಶ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಯಶ್ ಪಾತ್ರ 10 ನಿಮಿಷಗಳ ಕಾಲ ಇರಲಿದೆ ಎನ್ನಲಾಗ್ತಿದೆ. ಈ ಪಾತ್ರದ ಚಿತ್ರೀಕರಣ ಸದ್ಯದಲ್ಲಿಯೇ ಆರಂಭವಾಗಲಿದೆ ಎನ್ನಲಾಗುತ್ತಿದೆ. ಇದೇ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಟ ಯಶ್ ಸಲಾರ್ ಶೂಟಿಂಗ್ ಆರಂಭಿಸಲಿದ್ದಾರೆಂಬ ಗಾಳಿ ಸುದ್ದಿ ತೆಲುಗು ಸಿನಿಮಾ ನಗರ್ ನಲ್ಲಿ ಭಾರೀ ಸೌಂಡ್ ಮಾಡ್ತಿದೆ.