ಡಮಾಸ್ಕಸ್: ಸಿರಿಯಾದಲ್ಲಿನ ಇರಾನ್ ದೂತಾವಾಸ ಕಚೇರಿ ಮೇಲೆ ಇಸ್ರೇಲ್ ವೈಮಾನ ದಾಳಿ ನಡೆಸಿದ್ದು, ಕನಿಷ್ಠ 11 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಸಿರಿಯಾದಲ್ಲಿರುವ ಇರಾನ್ನ ಮಿಲಿಟರಿ ಅಧಿಕಾರಿಗಳನ್ನು ಗುರಿಯಾಗಿಸುವ ಸಂಬಂಧ ಇಸ್ರೇಲ್ ನಿಂದ ಸ್ಪಷ್ಟ ಸಂದೇಶವಾಗಿದೆ ಎನ್ನಲಾಗಿದೆ. ಇರಾನ್ ಮತ್ತು ಆ ದೇಶದ ಮಿಲಿಟರಿ ಅಧಿಕಾರಿಗಳು ಇಸ್ರೇಲ್ ವಿರುದ್ಧ ಗಾಜಾದಲ್ಲಿ ಹಾಗೂ ಲೆಬನಾನ್ ಗಡಿಯಲ್ಲಿ ಹೋರಾಡುತ್ತಿರುವ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸುವುದಕ್ಕೆ ಇಸ್ರೇಲ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ದಾಳಿ ಅದರ ಭಾಗವಾಗಿದೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ರೆಜಾ ಜಹೇದಿ, ಉನ್ನತ ಶ್ರೇಣಿಯ ಅಧಿಕಾರಿ ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಹಾದಿ ಹಾಜಿ ರಹೀಮಿ ಸೇರಿದಂತೆ 7 ಜನರು ಹತ್ಯೆಯಾಗಿದ್ದಾರೆ.
ದಾಳಿಯ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಇಸ್ರೇಲ್ ಹೇಳಿದ್ದರೆ, ಪ್ರತಿಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ಹೇಳಿದೆ. ಹೀಗಾಗಿ ದಾಳಿ ಇನ್ನೂ ಭೀಕರತೆ ಪಡೆಯಲಿದೆ ಎಂದು ಮುನ್ಸೂಚನೆ ಹೇಳಿದೆ.