ತಾಂತ್ರಿಕ ತೊಂದರೆ ; ಕಕ್ಷೆಗೆ ಸೇರದ ಇಒಎಸ್-03
ಆಂಧ್ರ ಪ್ರದೇಶ : ಇಂದು ಮುಂಜಾನೆ ಅತ್ಯಾಧುನಿಕ ಜಿಯೋ ಇಮೇಜಿಂಗ್ ಉಪಗ್ರಹ ಇಒಎಸ್ 03 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದ್ದು, ಕ್ರಯೋಜೆನಿಕ್ ಹಂತದಲ್ಲಿ ವೈಫಲ್ಯ ಅನುಭವಿಸಿದೆ.
ಇದರೊಂದಿಗೆ ವಿವಿಧ ಉದ್ದೇಶಿತ ಅತ್ಯಾಧುನಿಕ ಜಿಯೋ ಇಮೇಜಿಂಗ್ ಉಪಗ್ರಹ ಇಒಎಸ್-03 ಅನ್ನು ನಿಗದಿತ ಕಕ್ಷೆ ಸೇರಿಸುವಲ್ಲಿ ಇಸ್ರೋ ವಿಫಲವಾಗಿದೆ.
ಇದು ಇಒಎಸ್-03 ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಭೂ ಪರಿವೀಕ್ಷಣಾ ಉಪಗ್ರಹವಾಗಿದ್ದು, ಜಿಎಸ್ಎಲ್ವಿ ಎಫ್-10 ಲಾಂಚಿಂಗ್ ವೆಹಿಕಲ್ ಮೂಲಕ ಜಿಯೋಸಿಂಕ್ರೊನಸ್ ಟ್ರಾನ್ಸ್ಫರ್ ಆರ್ಬಿಟ್ನಲ್ಲಿ ಇರಿಸಬೇಕಿತ್ತು. ಆದ್ರೆ ಕ್ರಯೋಜೆನಿಕ್ ಹಂತದಲ್ಲಿ ತಾಂತ್ರಿಕ ತೊಂದರೆಯಿಂದಾಗಿ ವೈಫಲ್ಯ ಅನುಭವಿಸಿದೆ.