ಬೆಂಗಳೂರು: ನಗರದಲ್ಲಿ ಬೆಳ್ಳಂಬೆಳಿಗ್ಗೆ ಬೃಹತ್ ಐಟಿ ದಾಳಿ (IT Raid) ನಡದಿದ್ದು, ಕೋಟ್ಯಾಂತರ ಮೌಲ್ಯದ ಹಣ, ಚಿನ್ನಾಭರಣ, ನಗದು ಪತ್ತೆಯಾಗಿದೆ.
ದಾಳಿ ಸಂದರ್ಭದಲ್ಲಿ 2,500 ಕೋಟಿ ರೂ. ಮೊತ್ತದ ಅಕ್ರಮ ಬಯಲಿಗೆ ಬಂದಿದೆ. ದಾಖಲೆ ಇಲ್ಲದ 7 ಕೋಟಿ ರೂ. ನಗದು ಹಾಗೂ 2 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಿದೆ.
ಕಾವೇರಿ ಥೇಯೇಟರ್ ಹತ್ತಿರದ ಗಜರಾಜ್ ಜ್ಯುವೆಲ್ಲರಿ ಶಾಪ್, ಸದಾಶಿವನಗರದ ಭೂಮಿಕಾ ಅಪಾರ್ಟ್‍ಮೆಂಟ್, ಶಾಂತಿನಗರ, ವಿಜಯನಗರ, ಹುಳಿಮಾವು ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿನ್ನದ ಅಂಗಡಿ ಮಾಲೀಕರು, ಆಸ್ಪತ್ರೆ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಶಿಕ್ಷಣ ಸಂಸ್ಥೆ ಮಾಲೀಕರ ಮನೆಗಳು ಸೇರಿದಂತೆ ಪೂವಾರ್ಂಕರ ಇನ್ಫಾ ಮತ್ತು ಪೂವಾರ್ಂಕರ ಗ್ರೂಪ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.