ಇದು ಮಾನವರಂತಯೇ ಮಾತನಾಡುವ ಬೀಟ್ ಬಾಕ್ಸ್ ಪಕ್ಷಿ….
ಪಕ್ಷಿಗಳ ಚಲನವಲನಗಳನ್ನ ನೋಡೋದು ಆವುಗಳ ಧ್ವನಿಯನ್ನ ಆಲಿಸುವುದೇ ಒಂದು ವಿಶೇಷ ಅನುಭವನ್ನ ನೀಡುತ್ತದೆ. ಅದರಲ್ಲೂ ಕೆಲವು ಪಕ್ಷಿಗಳಿ ಮನುಷ್ಯನಿಗೆ ತೀರಾ ನಿಕಟ ವರ್ತಿಗಳಂತೆ ವರ್ತಿಸುತ್ತವೆ, ಗಿಳಿ ಪ್ರಭೇಧಕ್ಕೆ ಸೇರಿದ ಪಕ್ಷಿಗಳು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಮಾನವರಂತೆ ಮಾತನಾಡಲು ಅನುಕರಣೆ ಮಾಡುತ್ತವೆ.
ನೀವು ಈ ಇನ್ಸ್ಟಾಗ್ರಾಂ ನ ವೀಡಿಯೋವನ್ನ ನೋಡಿದರೆ ಮಾನವರಂತೆಯೇ ಮಾತನಾಡುವ ಗಿಳಿಯನ್ನ ನೋಡಬಹುದು. ಇದು ಬಬಲ್ಸ ಎಂಬ ಹೆಸರಿನ ಗಿಳಿ ಜಾತಿಗೆ ಸೇರಿದ ಬೀಟ್ ಬಾಕ್ಸ್ ಪಕ್ಷಿ. ಮಾನವರಂತೆಯೇ ಸ್ಪಷ್ಟವಾಗಿ ಉಚ್ಚರಿಸಬಲ್ಲದು.
ವೀಡಿಯೋದಲ್ಲಿ ವ್ಯಕ್ತಿಯ ಭುಜದಲ್ಲಿರುವ ಪಕ್ಷಿಯ ಹತ್ತಿರ ಚಿಕ್ಕ ಮೈಕ್ ಹಿಡಿಯಲಾಗುತ್ತದೆ. ಮೊದಲಿಗೆ ಹಾಯ್ ಎಂದು ಶುರು ಮಾಡುವ ಪಕ್ಷಿ “ ನಾನು ಅತ್ಯಂತ ಖುಷಿಯ ಪಕ್ಷಿ ಸ್ವೀಟ್ ಬಬಲ್ಸ್ ಎಂದು ಹೇಳುತ್ತದೆ. ಅಕ್ಷರವನ್ನ ಸ್ವಚ್ಚವಾಗಿ ಉಚ್ಛರಿಸುವ ಪಕ್ಷಿಯ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ.
https://www.instagram.com/p/CXMpwUQqajG/?utm_source=ig_embed&utm_campaign=embed_video_watch_again