ಯೋಚಿಸ್ತಿದ್ದಿರಾ ಯಾರಿರ್ಬಹುದು ಜೊತೆಗೆ ಅಂತ… ಕೆಲವರಿಗೆ ಅನಿಸಬಹುದು ಬಾಯ್ ಫ್ರೆಂಡ್ ಇರಬಹುದು, ಇಲ್ಲಾ ಇನ್ಯಾರೊ ಅಂತ ನೀವು ಏನ್ ತಿಳ್ಕೊಳ್ತೀರಿ ಹಂಗೆ…ಎಂತ ಹೇಳುದು ಮಾರ್ರೆ ಅವರ ಬಗ್ಗೆ, ನಾನು ಬೇಡ ಅಂದ್ರು ನನ್ ಜೊತೆನೆ ಬರ್ತಾರೆ, ಆದ್ರೆ ಯಾಕ್ ಬರ್ತಿಯ ಅಂತ ಕೇಳಿದ್ರೆ ಉತ್ತರ ಇಲ್ಲ, ನನ್ನ ಜೊತೆ ಇರುವವರು ಮಾತ್ರ ನನ್ನ ಬಗ್ಗೆ ಏನೋ ಮಾತಾಡ್ತಾರೆ, ಯಾರಿಗೋ ಹೋಗಿ ಏನೋ ಹೇಳ್ತಾರೆ ಅಂತ ಭಯವಿಲ್ಲ.
ಇಲ್ಲದಿದ್ರೆ ನಮ್ಗೆ ಅನಿಸುದುಂಟು ನಾವು ಮಾತಡೋದು ನಮ್ಮೊಡನೆ ಇರುವವರಿಗೆ ಸರಿ ಅನಿಸುವುದಿಲ್ಲವೇನು, ಅವರು ನಮ್ಮ ಬಗ್ಗೆ ಏನು ತಿಳ್ಕೊಳ್ತಾರೊ ಹೀಗೆಲ್ಲಾ.. ನಮ್ಮ ಜೊತೆ ಇರುವ ಇತರರ ಬಗ್ಗೆ ಯೋಚನೆ ಬರುವುದುಂಟು. ಆದರೆ ನಾನು ಈಗ ಹೇಳ್ತಿರುವವರು ಹಾಗೆ ಅಲ್ಲ. ನಾನು ಕೂತ್ರೂ ಕೂರ್ತಾರೆ, ನಿಂತ್ರು ನಿಲ್ತಾರೆ, ಕುಣಿದ್ರು ಅವರು ಸಹ ಕುಣಿಯೊದೆ ಮಾರ್ರೆ, ಹೋಗು ಹೋಗು ಅಂತ ಎಷ್ಟು ಬೈದ್ರು ಅವರಂತು ನನ್ನ ಬಿಟ್ಡು ಹೋಗೋದಿಲ್ಲ. ನನ್ನ ಮನಸ್ಸು ಕೂಡ ಕೆಲವೊಮ್ಮೆ ಎಲ್ಲೆಲ್ಲಿಗೆ ಅಲೆದಾಡ್ಲಿಕ್ಕೆ ನನ್ನ ಬಿಟ್ಟು ಹೋಗಿದ್ದುಂಟು. ಆದರೆ ಇವರು ಹಾಗಲ್ಲ ಒಮ್ಮೊಮ್ಮೆ ನನ್ನ ಮುಂದೆ, ಇನ್ನೊಮ್ಮೆ ನನ್ನ ಹಿಂದೆ, ಮತ್ತೊಮ್ಮೆ ಎಡದಲ್ಲಿ, ಮತ್ತೆ ಕೆಲವು ಸಲ ಬಲದಲ್ಲಿ.
ಹೀಗೆ ಇವರು ನನ್ನ ಸುತ್ತನೆ ಇರ್ತಾರೆ. ನಾನು ಸಣ್ಣದು ಇರುವಾಗ ಇವರನ್ನು ನೋಡಿ ಗುಮ್ಮ ಅಂತ ಹೆದ್ರಿದ್ದೂ ಉಂಟು. ನನ್ನನ್ನು ಹೆದರಿಸಿದ್ರು ಕೂಡ ಅವರು ಇರುವುದು ನನ್ನ ಜೊತೆನೆ. ನಿಮ್ಮೊಡನೆಯು ಅವರು ಇದ್ದಾರೆ, ನಿಮ್ಮ ಜೊತೆಯು ಅವರ ಪಯಣ ಮುಗಿಯೋದೆ ಇಲ್ಲ. ಅದು ಬೇರೆ ಯಾರೂ ಅಲ್ಲ ನಮ್ಮ ನೆರಳು…. ಹೌದಲ್ವ ನಮ್ಮ ನೆರಳು ನಮ್ಮ ಬಿಟ್ಟು ಯಾವತಾದ್ರೂ ಹೋಗಿದೆಯಾ …!!!?ಅದು ನಮ್ಮೊಡನೆ ಎಂದು ಮುಗಿಯದ ಪಯಣ…
ನಳಿನಿ ಎಸ್ ಸುವರ್ಣ ಜಾರ್ಕಳ ಮುಂಡ್ಲಿ