ದೆಹಲಿಯ ರೈಲ್ವೆ ನಿಲ್ದಾಣವೊಂದರಲ್ಲಿ ಬಸ್ಕಿ ಹೊಡೆದರೆ ಉಚಿತ ಪ್ಲಾಟ್ ಫಾರ್ಮ್ ಟಿಕೆಟ್ ಕೊಡುವ ಮೆಷಿನ್ ನನ್ನು ಇರಿಸಲಾಗಿದೆ. ದೆಹಲಿಯ ಆನಂದ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಈ ಒಂದು ವಿಶೇಷವಾದ ಮೆಷಿನ್ ನನ್ನು ಇಡಲಾಗಿದ್ದು, ಈ ಮೆಷಿನ್ ನ ಮುಂದೆ 30 ಬಾರಿ ಬಸ್ಕಿ ಹೊಡೆದರೆ ಅದು ಉಚಿತ ಪ್ಲಾಟ್ ಫಾರ್ಮ್ ಟಿಕೆಟ್ ನೀಡಲಿದೆ. ಹಮ್ ಫಿಟ್ ಥೋ ಇಂಡಿಯಾ ಫಿಟ್ ಹೇ
ಎಂಬ ಪ್ರಧಾನಿಯವರ ಮಾತನ್ನು ರೈಲ್ವೆ ಇಲಾಖೆ ಈ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಹೊರಟಿದೆ.
ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್ಟರ್ ನಲ್ಲಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಫಿಟ್ ನೆಸ್ ಯಂತ್ರದ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಉಳಿತಾಯದ ಜೊತೆಗೆ ಫಿಟ್‌ನೆಸ್ ಅನ್ನು ಉತ್ತೇಜಿಸಲು ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಒಂದು ವಿಶಿಷ್ಟ ಪ್ರಯೋಗವನ್ನು ಮಾಡಲಾಗಿದೆ. ಈಗ ಇಲ್ಲಿ ಸ್ಥಾಪಿಸಲಾದ ಯಂತ್ರದ ಮುಂದೆ ವ್ಯಾಯಾಮ ಮಾಡಿದ ನಂತರ ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದು ಪಿಯೂಷ್ ಗೋಯಲ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ
ಕಸ್ತೂರಿ ರಂಗನ್ ವರದಿ ಜಾರಿಗೆ ಕಾಲಾವಕಾಶ ಕೇಳುವ ನಿರ್ಣಯ, ಎನ್‌ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಪ್ರತಿಪಕ್ಷ ನಾಯಕ ಆರ್.ಅಶೋಕ ಸಲಹೆ
ಕಸ್ತೂರಿ ರಂಗನ್ ವರದಿ ಜಾರಿಗೆ ಕಾಲಾವಕಾಶ ಕೇಳುವ ನಿರ್ಣಯ, ಎನ್‌ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಪ್ರತಿಪಕ್ಷ ನಾಯಕ ಆರ್.ಅಶೋಕ ಸಲಹೆ ಇದು ಕೇಂದ್ರ ಸರ್ಕಾರದ ಕೈಯಲ್ಲಿ...








