68ನೇ ವಸಂತಕ್ಕೆ ಕಾಲಿಟ್ಟ ಜಾಕಿ ಚಾನ್, ಬಾಲಿವುಡ್ ಜೊತೆಗೂ ಇದೆ ನಂಟು

1 min read

68ನೇ ವಸಂತಕ್ಕೆ ಕಾಲಿಟ್ಟ ಜಾಕಿ ಚಾನ್, ಬಾಲಿವುಡ್ ಜೊತೆಗೂ ಇದೆ ನಂಟು

ಜಾಕಿ ಚಾನ್  ತಮ್ಮ ಪ್ರಚಂಡ  ಆಕ್ಷನ್‌ ಮತ್ತು  ಹಾಸ್ಯದ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಜಾಗ ಪಡೆದ ನಟ. ಬಹುತೇಕ ಎಲ್ಲಾ ದೇಶಗಳಲ್ಲೂ  ಇಷ್ಟಪಡುವ ನಟ. ಕೇವಲ ಐದನೇ ವಯಸ್ಸಿನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಹಾಂಗ್ ಕಾಂಗ್ ಮಾರ್ಷಲ್ ಆರ್ಟಿಸ್ಟ್ ಇದುವರೆಗೆ ಸುಮಾರು 131 ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದು (ಏಪ್ರಿಲ್ 7) ಜಾಕಿಯ 68ನೇ ಹುಟ್ಟುಹಬ್ಬ.  ನೀವು ಜಾಕಿ ಚಾನ್ ಬಗ್ಗೆ ಸಾಕಷ್ಟು ಕೇಳಿದ್ದೀರ..  ಆದರೆ ಜಾಕಿಚಾನ್ ಗೆ ಭಾರತದೊಂದಿಗೆ ವಿಶೇಷ ನಂಟಿದೆ ಎಂಬ  ವಿಷಯ ನಾವು ತಿಳಿಸಿಕೊಡ್ತೀವಿ.

68 ವರ್ಷದ ಜಾಕಿ ಚಾನ್ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಜೂಡೋ, ಟೇಕ್ವಾಂಡೋ ಸೇರಿದಂತೆ ಅನೇಕ ಇತರ ಸಮರ ಕಲೆಗಳಲ್ಲಿ ಜಾಕಿ ಪಂಟರ್.  ಜಾಕಿ ಚಾನ್ 70 ಮತ್ತು 80 ರ ದಶಕದಲ್ಲಿ ಹಾಂಗ್ ಕಾಂಗ್ ಚಿತ್ರರಂಗದಲ್ಲಿ ಕೆಲಸ ಮಾಡಲು  ಶುರು ಮಾಡಿದರು.  90 ರ ದಶಕದಲ್ಲಿ ದೊಡ್ಡ ಸ್ಟಾರ್ ನಟರಾಗಿ ಬೆಲೆದು ನಿಂತ್ರು.  ಜಾಕಿ ಚಾನ್ ಅನೇಕ ಆಕ್ಷನ್ ಚಿತ್ರಗಳಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳೊಂದಿಗೆ  ಕೆಲಸ ಮಾಡಿರುವುದನ್ನ  ನೀವು ನೋಡಿದ್ದೀರಾ,  ಆದರೆ  ಭಾರತೀಯ  ನಟ ನಟಿಯರೊಂದಿಗೂ ಅವರು ತೆರೆ ಹಂಚಿಕೊಂಡಿದ್ದಾರೆ ಎಂಬುದು ನಿಮಗೆ ಗೊತ್ತಾ ?  ಬಾಲಿವುಡ್ ಆಕ್ಷನ್ ಹೀರೋ ಸೋನು ಸೂದ್ ಜೊತೆ ಜಾಕಿ ಚಾನ್  ಕೆಲಸ ಮಾಡಿದ್ದಾರೆ.

2017 ರಲ್ಲಿ ಬಿಡುಗಡೆಯಾದ ಕಾಮಿಡಿ ಆಕ್ಷನ್ ಚಿತ್ರ ‘ಕುಂಗ್ ಫೂ ಯೋಗಾ’ದಲ್ಲಿ, ಜಾಕಿಚಾನ್  ಬಾಲಿವುಡ್ ನಟರೊಂದಿಗೆ ಕೆಲಸ  ಮಾಡಿದ್ದರು.  ಪುರಾತತ್ತ್ವ ಶಾಸ್ತ್ರದ ಪ್ರೊಫೆಸರ್ ಪಾತ್ರದಲ್ಲಿ  ಜ್ಯಾಕ್  ಕಾಣಿಸಿಕೊಂಡಿದ್ದರು.  ಭಾರತದ ಕಳೆದುಹೋದ ನಿಧಿಯನ್ನು ಕಂಡುಹಿಡಿಯಲು ಭಾರತೀಯ ಪ್ರಾಧ್ಯಾಪಕರ ಜೊತೆ ಕೈಗೂಡಿಸುವ ಪಾತ್ರದಲ್ಲಿ  ನಟಿಸಿದ್ದರು. ಈ ಇಬ್ಬರು ನಟರ ಜೊತೆ ಬಾಲಿವುಡ್ ನಟಿ ದಿಶಾ ಪಟಾನಿ ಮತ್ತು ಅಮೈರಾ ದಸ್ತು ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.  ಚಿತ್ರದ ಅರ್ಧ ಭಾಗ ಚೀನಾದಲ್ಲಿ  ಅರ್ಧಭಾಗ ಭಾರತದಲ್ಲಿ ಚಿತ್ರೀಕರಿಸಲಾಗಿದೆ.

‘ಕುಂಗ್ ಫೂ ಯೋಗ’ ಚಿತ್ರದಲ್ಲಿ ದಿಶಾ ಪಟಾನಿಯೊಂದಿಗೆ ಜಾಕಿ ಚಾನ್  ಡ್ಯಾನ್ಸ್ ಕೂಡ ಮಾಡಿದ್ದಾರೆ. ಅಪಾಯಕಾರಿ ಆ್ಯಕ್ಷನ್ ನಿಂದ ಜಗತ್ತಿನಾದ್ಯಂತ ಫೇಮಸ್ ಆಗಿರುವ ಜಾಕಿ ಚಾನ್ ಗೆ ಡ್ಯಾನ್ಸ್ ಎಂದರೆ ಭಯ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಜಾಕಿ ಚಾನ್  “ಭಾರತೀಯ ಚಲನಚಿತ್ರಗಳಲ್ಲಿನ ಡ್ಯಾನ್ಸ್ ಹಾಡುಗಳು ಆಕ್ಷನ್‌ಗಿಂತ ಹೆಚ್ಚು ಕಷ್ಟಕರವೆಂದು ಹೇಳಿಕೊಂಡಿದ್ದರು.

ಜಾಕಿ ಚಾನ್ ಈ ಹಿಂದೆ ಈ ಹಿಂದೆ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಜೊತೆ ತೆರೆ ಹಂಚಿಕೊಂಡಿದ್ದರು. ಮಲ್ಲಿಕಾ ಶೆರಾವತ್ ಮತ್ತು ಜಾಕಿ ಚಾನ್ 2005 ರ ‘ದಿ ಮಿಥ್’ ಚಿತ್ರದಲ್ಲಿ ಕೆಲಸ ಮಾಡಿದರು. ಮಲ್ಲಿಕಾ ‘ದಿ ಮಿಥ್’ ಚಿತ್ರದಲ್ಲಿ ಬಹಳ ಚಿಕ್ಕ ಪಾತ್ರವನ್ನು ಮಾಡಿದರು, ಅದರಲ್ಲಿ ಅವರು ಜಾಕಿಯೊಂದಿಗೆ ಕೇವಲ ಎಂಟು ನಿಮಿಷಗಳ ಕಾಲ ಪರದೆಯ ಮೇಲೆ ಕಾಣಿಸಿಕೊಂಡಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd