‘ವಿಕ್ರಾಂತ್ ರೋಣ’ದಲ್ಲಿ ಕಿಚ್ಚನ ಜೊತೆ ಹೆಜ್ಜೆ ಹಾಕಲು ‘ಲಂಕಾ’ ಸುಂದರಿ ಕೇಳಿದ ಸಂಭಾವನೆ ಎಷ್ಟು ಗೊತ್ತಾ..?

1 min read

‘ವಿಕ್ರಾಂತ್ ರೋಣ’ದಲ್ಲಿ ಕಿಚ್ಚನ ಜೊತೆ ಹೆಜ್ಜೆ ಹಾಕಲು ‘ಲಂಕಾ’ ಸುಂದರಿ ಕೇಳಿದ ಸಂಭಾವನೆ ಎಷ್ಟು ಗೊತ್ತಾ..?

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಕಿಚ್ಚ ಸುದೀಪ್ ಅಭಿನಯದ ಪಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣದ ಬಹುತೇಕ ಶೂಟಿಂಗ್ ಈಗಾಗಲೇ ಮುಗಿದಿದೆ..  ಹಾಡುಗಳ ಚಿತ್ರೀಕರಣವಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಈ ನಡುವೆ  ಸಿನಿಮಾದ ವಿಶೇಷ ಹಾಡು ( ಐಟಂ ಸಾಂಗ್ ಗೆ ) ಬಾಲಿವುಡ್ ನ ಗ್ಲಾಮರಸ್ ಗೊಂಬೆ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಕರೆತರಲಾಗುತ್ತಿದೆ ಎನ್ನಲಾಗಿದೆ. ಈ ಹಾಡಿನಲ್ಲಿ ಜಾಕ್ವೆಲಿನ್  ಕಿಚ್ಚನ ಜೊತೆಗೂ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ.. ಹೀಗೆ ಹಾಡಂದಕ್ಕೆ ಮೈ ಬಳುಕಿಸಲು ಜಾಕ್ವೆಲಿನ್ ಭಾರೀ ಮೊತ್ತದ ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ಹೌದು..  ಈ  ಹಾಡಿಗಾಗಿಯೇ ಸುಮಾರು 3 ಕೋಟಿ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಹೇಳಲಾಗ್ತಿದೆ..  ಈ ಒಂದು ಹಾಡಿಗಾಗಿಯೇ ಜಾಕ್ವೆಲಿನ್  ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಜಾಕ್ವೆಲಿನ್ ಫರ್ನಾಂಡೀಸ್ ಕಳೆದ ಮೇ ತಿಂಗಳಲ್ಲಿಯೇ ಹಾಡಿಗೆ ನರ್ತಿಸಲು ಬೆಂಗಳೂರಿಗೆ ಬರಬೇಕಾಗಿತ್ತು. ಆದರೆ ಕೊರೊನಾ ಎರಡನೇ ಅಲೆಯಿಂದಾಗಿ ಲಾಕ್‌ಡೌನ್ ಆದ ಕಾರಣ ಜಾಕ್ವೆಲಿನ್ ಬರಲಾಗಲಿಲ್ಲ ಎನ್ನಲಾಗಿದೆ. ಇನ್ನೂ  ಈ ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ. ಸಿನಿಮಾಗೆ  ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳ್ತಿದ್ರೆ , ನಿರೂಪ್ ಭಂಡಾರಿ ಸಹ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  ಶ್ರದ್ಧಾ ಶ್ರೀನಾಥ್  ಹಾಗೂ  ನೀತಾ ಅಶೋಕ್  ನಾಯಕಿಯಾರಾಗಿದ್ದು ,  ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.

ಜುಲೈ 16ಕ್ಕೆ ರಿಲೀಸ್ ಆಗಲ್ಲ ‘KGF 2’ : ಪ್ರಶಾಂತ್ ನೀಲ್ ಹೇಳಿದ್ದೇನು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd