ಬೆಂಗಳೂರು : ನಟ, ರಾಜಕಾರಣಿ ಜಗ್ಗೇಶ್ ಅವರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಜಗ್ಗಣ್ಣ, “ಇಂಥ ಅನೇಕ ಅಮಾಯಕರ ಕಣ್ಣಾರೆ ಕಂಡು ಏನು ಮಾಡಲಾಗದೆ ರಾಜಕೀಯ ವ್ಯೆವಸ್ಥೆ ನಾನು ಶಪಿಸುವೆ! ಜನರಿಗಾಗಿ ಎಂದು ಜನರಿಂದ ಗೆದ್ದುಬಂದು ಜಾಣಕುರುಡು ಪ್ರದರ್ಶನ ಮಾಡುವವರೆ ಇಂಥ ಅಮಾಯಕರಿಗೆ ಸಹಾಯ ಮಾಡಿ! ಇಲ್ಲದಿದ್ದರೆ ನಿಮ್ಮ ಯಾವ ದೇವರು ಕ್ಷಮಿಸೋಲ್ಲಾ! ಅದಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ!ಬಡವರ ಶಾಪ ಒಂದುದಿನ ಸುಟ್ಟುಬಿಡುತ್ತದೆ!” ಎಂದು ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಅಂದಹಾಗೆ ಜಗ್ಗೇಶ್ ಈ ರೀತಿ ಟ್ವೀಟ್ ಮಾಡಲು ಕಾರಣ, ಮಂಜುನಾಥ್ ಗೌಡ ಎಂಬುವರು ಶೇರ್ ಮಾಡಿದ್ದ ವಿಡಿಯೋ..!
ಹೌದು..! ಟ್ವಿಟ್ಟರ್ ಬಳಕೆದಾರ ಮಂಜುನಾಥ್ ಅವರು, ಶೇರ್ ಮಾಡಿದ ವಿಡಿಯೋದಲ್ಲಿ ಅಂಧ ವ್ಯಕ್ತಿಯೊಬ್ಬ ಸರ್ಕಾರದಿಂದ ತನಗೆ ಆಗಬೇಕಿರುವ ಕಾರ್ಯವೊಂದಕ್ಕಾಗಿ ಅಧಿಕಾರಿಗಳ ಬಳಿ ಅಳುತ್ತಾ ಬೇಡಿಕೊಳ್ಳುತ್ತಿದ್ದಾನೆ. ಐದು ವರ್ಷದಿಂದಲೂ ಅಲೆದಾಡುತ್ತಿದ್ದೀನಿ ಎಂದು ಕಣ್ಣೀರುಡುತ್ತಿದ್ದಾನೆ.
ಈ ವಿಡಿಯೋವನ್ನು ಕಂಡು ಮರುಕಪಟ್ಟಿರೋ ಜಗ್ಗೇಶ್, “ಇಂಥ ಅನೇಕ ಅಮಾಯಕರ ಕಣ್ಣಾರೆ ಕಂಡು ಏನು ಮಾಡಲಾಗದೆ ರಾಜಕೀಯ ವ್ಯೆವಸ್ಥೆ ನಾನು ಶಪಿಸುವೆ! ಜನರಿಗಾಗಿ ಎಂದು ಜನರಿಂದ ಗೆದ್ದುಬಂದು ಜಾಣಕುರುಡು ಪ್ರದರ್ಶನ ಮಾಡುವವರೆ ಇಂಥ ಅಮಾಯಕರಿಗೆ ಸಹಾಯ ಮಾಡಿ! ಇಲ್ಲದಿದ್ದರೆ ನಿಮ್ಮ ಯಾವ ದೇವರು ಕ್ಷಮಿಸೋಲ್ಲಾ ಎಂದು ಟ್ವೀಟ್ ಮಾಡಿದ್ದಾರೆ.
ಇಂಥ ಅನೇಕ ಅಮಾಯಕರ ಕಣ್ಣಾರೆ ಕಂಡು ಏನು ಮಾಡಲಾಗದೆ ರಾಜಕೀಯ ವ್ಯೆವಸ್ಥೆ ನಾನು ಶಪಿಸುವೆ!
ಜನರಿಗಾಗಿ ಎಂದು ಜನರಿಂದ ಗೆದ್ದುಬಂದು ಜಾಣಕುರುಡು ಪ್ರದರ್ಶನ ಮಾಡುವವರೆ ಇಂಥ ಅಮಾಯಕರಿಗೆ ಸಹಾಯ ಮಾಡಿ!ಇಲ್ಲದಿದ್ದರೆ ನಿಮ್ಮ ಯಾವ ದೇವರು ಕ್ಷಮಿಸೋಲ್ಲಾ!ಅದಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ!ಬಡವರ ಶಾಪ ಒಂದುದಿನ ಸುಟ್ಟುಬಿಡುತ್ತದೆ! https://t.co/sejK56p8Op— ನವರಸನಾಯಕ ಜಗ್ಗೇಶ್ (@Jaggesh2) July 28, 2020
ಇನ್ನು ಜಗ್ಗೇಶ್ ಟ್ವೀಟ್ ಗೆ ಸಾಕಷ್ಟು ಮಂದಿ ರಿಟ್ವೀಟ್ ಮಾಡಿದ್ದಾರೆ. ಅದರಲ್ಲಿ ಒಂದು ಟ್ವೀಟ್ ಹೀಗಿದೆ
“ಆಶ್ವಾಸನೆಯೆಂಬ ಬಿತ್ತನೆಯ ಬೀಜ ಒಣಗಿತವಿತು ಭುವಿಯಲ್ಲಿ ಮರವಾಗಿ ಫಲ ನೀಡಿದರೇನು ಸಿಹಿಯುಂಟೆ ರಾಜಕೀಯವೆಂಬ ಜಂಜಾಟದಲ್ಲಿ”..! ಅಣ್ಣಾ ತಪ್ಪಾಗ್ ತಿಳಿಬೇಡಿ ರಾಜ್ಯದಲ್ಲಿನ ಆಡಳಿತ ವ್ಯವಸ್ಥೆ ನಿಜಕ್ಕೂ ಕುಸಿದಿದೆ ದುಡ್ಡು ಮಾಡುವ ಧನಿಕರ ಕೇಕೆ ವ್ಯಾಪಿಸುತ್ತಿದೆ…. ಸಿರಿವಂತರಿಗೊAದು ಕಾನೂನು ಬಡವರಿಗೊಂದು ಛೇ..!
ಸರಿಯಿಲ್ಲ ಸರ್ಕಾರ”
ಈ ಟ್ವೀಟ್ ಗೆ ಉತ್ತರಿಸಿರುವ ಜಗ್ಗೇಶ್, “ಅವರು ಮಾಡಿದ ಪಾಪ ಅವರನ್ನೆ ಸುಡುತ್ತದೆ!ದೇವನೊಬ್ಬನಿರುವ ಅವ ಎಲ್ಲಾ ನೋಡುತ್ತಿರುವ” ಎಂದು ತಮ್ಮದೇ ಸರ್ಕಾರವನ್ನು ಕುಟುಕಿದ್ದಾರೆ.






