ಜಾಲಪ್ಪ ನೇರ ನುಡಿಯ ನಿಸ್ವಾರ್ಥ ರಾಜಕಾರಣಿ : ಸಿಎಂ ಕಂಬನಿ bommai saaksha tv
ಕೋಲಾರ : ಕೇಂದ್ರ ಮಾಜಿ ಸಚಿವ ಆರ್ ಎಲ್ ಜಾಲಪ್ಪ ಅವರ ನಿಧನ್ಕಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಜಾಲಪ್ಪನ ಅವರ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಬಳಿಕ ಮಾತನಾಡಿದ ಬೊಮ್ಮಾಯಿ, ಹಿರಿಯರು ಮತ್ತು ಅನುಭವಿ ಮಾರ್ಗದರ್ಶಕ ಜಾಲಪ್ಪ ಅವರನ್ನು ಕಳೆದುಕೊಂಡಿದ್ದೇವೆ. ಮನಸ್ಸಿಗೆ ನೋವು ಆಗಿದೆ, ನೇರ ನುಡಿಯ ನಿಸ್ವಾರ್ಥ ರಾಜಕಾರಣಿ, ಕೋ ಆಪರೇಟಿವ್ ಬ್ಯಾಂಕಿನಲ್ಲಿ ಜಾಲಪ್ಪ ನವರ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಾಲಪ್ಪನವರ ಜನಪರ ಕಾರ್ಯಗಳನ್ನ ಸ್ಮರಿಸಿದರು.
ಇನ್ನು ಶಾಸಕರಾಗಿ, ಸಂಸದರಾಗಿ, ಕರ್ನಾಟಕದಲ್ಲಿ ಛಾಪು ಮೂಡಿಸಿದರು ಸತ್ಯವನ್ನು ನುಡಿವ ವ್ಯಕ್ತಿ, ಜನತಾಪಾರ್ಟಿ ಜೊತೆ ಗಟ್ಟಿಯಾಗಿ ನಿಂತಿವರು. ದೇವರಾಜು ಅರಸು ಅವರಂತೆ ಹಿಂದುಳಿದ ನಾಯಕರಾಗಿದ್ದರು. ದೇವರಾಜ್ ಅರಸ್ ಮೆಡಿಕಲ್ ಕಾಲೇಜನ್ನು ಊಹೆಗೆ ಮಾಡಿದಷ್ಟು ಬೆಳೆಸಿದ್ದಾರೆ. ಸಕ್ರಿಯ ರಾಜಕಾರಣದಿಂದ ದೂರವಿದ್ದರು,ಅವರ ಮಾರ್ಗದರ್ಶನ ಅಗತ್ಯವಿತ್ತು. 97 ರ ಅವರ ಹಿರಿತನ ರಾಜ್ಯಕ್ಕೆ ಬೇಕಾಗಿತು. ಅವರು ಅನೇಕ ವಿಷಯಗಳನ್ನು ಬಿಟ್ಟು ಹೋಗಿದ್ದು ಅವರ ಮಾರ್ಗದರ್ಶನದಲ್ಲಿ ಸಾಗೋಣ. ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನಡೆಸೋಣ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದರು.