Hijab controvercy : ಹಿಜಾಬ್ ಇಲ್ಲದೇ ಇರೋದ್ರಿಂದ ಅತ್ಯಾಚಾರಗಳಾಗುತ್ತಿವೆ ಎನ್ನುವ ಜಮೀರ್ ಹೇಳಿಕೆ ನಿರ್ಲಜ್ಜದ ಹೇಳಿಕೆ : ಪ್ರಮೋದ್ ಮುತಾಲಿಕ್
ಹಿಜಾಬ್ ಇಲ್ಲದೇ ಇರೋದ್ರಿಂದ ಅತ್ಯಾಚಾರಗಳಾಗುತ್ತಿವೆ ಎನ್ನುವ ಜಮೀರ್ ಅಹಮ್ಮದ ಹೇಳಿಕೆ ನಿರ್ಲಜ್ಜದ ಹೇಳಿಕೆ… ಇಡೀ ಮಹಿಳೆಯರಿಗೆ ಅವಮಾನ ಮಾಡುವ ಸಂಗತಿಯಾಗಿದೆ… ಈ ದೇಶದಲ್ಲಿ ಹಿಂದೂ ಮಹಿಳೆಯರು ಹಿಜಾಬ್ ಇಲ್ಲದೇ ಜೀವನ ಮಾಡ್ತಾ ಇದ್ದಾರೆ…
ಹಿಜಾಬ್ ಇಲ್ಲದ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆಯಾ… ಮಾತನಾಡ ಬೇಕಾದ್ರೆ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು…. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡಿ… ಅದು ಬಿಟ್ಟು ಹಿಜಾಬ್ ಸಮರ್ಥನೆ ಮಾಡಿಕೊಳ್ಳುವುದಕ್ಕೆ ಅದನ್ನ ಅತ್ಯಾಚಾರಕ್ಕೆ ಜೋಡಿಸುತ್ತೀರಿ ಎಂದ್ರೆ ನಾನು ಅದನ್ನ ಖಂಡಿಸುತ್ತೇನೆ… ಎಂದು ಜಮಖಂಡಿಯಲ್ಲಿ ಶ್ರೀರಾಮ ಸೇನಾ ಮುಖಂಡ ಪ್ರಮೋದ ಮುತಾಲಿಕ್ ಕಿಡಿಕಾರಿದ್ದಾರೆ…
ಹಿಜಬ್ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಜಮೀರ್ ಅಹಮದ್ ಅವರು ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದೆ… ಇದು ಮಹಿಳೆಯರಿಗೆ ಜಮೀರ್ ಅಹಮದ್ ಮಾಡಿರೋ ಅಪಮಾನ ಎಂದು ಅನೇಕರು ಅವರ ವಿರುದ್ಧ ಕಿಡಿಕಾರಿದ್ದಾರೆ…
ಹಿಜಾಬ್ ವಿಚಾರವಾಗಿ ಮಾತನಾಡ್ತಾ ಜಮೀರ್ ಅಹಮದ್ ಅವರು, ಹಿಂದೂಸ್ತಾನದಲ್ಲೇ ಅತಿ ಹೆಚ್ಚು ರೇಪ್ ರೇಟ್ ಇದೆ… ಹಿಜಾಬ್ ಧರಿಸುವುದು ಹೆಣ್ಣುಮಕ್ಕಳು ತಮ್ಮ ಬ್ಯೂಟಿ ಕವರ್ ಮಾಡಿಕೊಳ್ಳುವದಕ್ಕೆ,,, ಅವರ ಸೇಫ್ಟಿಗಾಗಿ ಎಂದು ಹೇಳುವ ಸಂದರ್ಭದಲ್ಲಿ ಹಿಜಬ್ ಧರಿಸದೇ ಇದ್ದವರ ಮೇಲೆ ಅತ್ಯಾಚಾರವಾಗುತ್ತದೆಂಬ ಅರ್ಥ ಕಲ್ಪಿಸುವ ರೀತಿಯಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಎಡವಟ್ಟಿನ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದರು…
ಇದೀಗ ಜಮೀರ್ ಅವರ ಹೇಳಿಕೆಯನ್ನ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತೀವ್ರವಾಗಿ ಖಂಡಿಸಿದ್ದಾರೆ..