JAMES | ಜೇಮ್ಸ್ ಚಿತ್ರ ವೀಕ್ಷಣೆಗೆ ಬರುವವರಿಗೆ ಭರ್ಜರಿ ಬಾಡೂಟ!
ಬೆಂಗಳೂರು : ಕರುನಾಡ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಗೆ ಕನ್ನಡಿಗರು ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.
ಜೇಮ್ಸ್ ಸಿನಿಮಾವನ್ನು ಕರುನಾಡಿಗರು ತಲೆಯ ಮೇಲೆ ಹೊತ್ತು ಮೆರೆಸುತ್ತಿದ್ದಾರೆ. ಜೇಮ್ಸ್ ಸಿನಿಮಾ ಈಗಾಗಲೇ ನೂರು ಕೋಟಿ ಕ್ಲಬ್ ಗೆ ಸೇರಿದ್ದು, ಸಾಕಷ್ಟು ದಾಖಲೆಗಳನ್ನು ಸೃಷ್ಟಿ ಮಾಡಿದೆ.
ಇತ್ತ ಅಭಿಮಾನಿಗಳು ಕೂಡ ಜೇಮ್ಸ್ ಹಬ್ಬವನ್ನ ಭರ್ಜರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಈ ನಡುವೆ ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳ ಬಳಗ ಹುಬ್ಬಳ್ಳಿ, ಕೊಪ್ಪಳದಲ್ಲಿ ಜೇಮ್ಸ್ ಸಿನಿಮಾ ವೀಕ್ಷಣೆಗೆ ಬರುವವರಿಗೆ ಭರ್ಜರಿ ಬಾಡೂಟವನ್ನು ಸಿದ್ಧಪಡಿಸಿದೆ.
ಹುಬ್ಬಳ್ಳಿ,ಯಲ್ಲಿ ಅಪ್ಪು ಅಭಿಮಾನಿಗಳು ಭಾನುವಾರದ ಬಾಡೂಟವನ್ನು ಆಯೋಜಿಸಿದ್ದಾರೆ. ಪುನೀತ್‍ಗೆ ಬಹಳಷ್ಟು ಇಷ್ಟವಾದ ಉತ್ತರ ಕರ್ನಾಟಕದ ಸಾವಜಿ ಊಟ ವಿತರಣೆ ಮಾಡುತ್ತಿದ್ದಾರೆ.
ಪುನೀತ್ ಅಭಿಮಾನಿ ರಾಘು ಮತ್ತು ಸ್ನೇಹಿತರಿಂದ ಜೇಮ್ಸ್ ಚಿತ್ರ ವೀಕ್ಷಣೆ ಬಂದ ಪ್ರೇಕ್ಷಕರಿಗೆ ಮಟನ್ ಊಟ ವಿತರಣೆ ಮಾಡಲಾಗುತ್ತಿದೆ. ಅಪ್ಸರಾ ಟಾಕೀಸ್ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಕೊಪ್ಪಳದ ಗಂಗಾವತಿಯಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗ, ಗಂಗಾವತಿ ನಗರದ ಶಿವೆ ಥೇಟರ್ ಮುಂಭಾಗದಲ್ಲಿ 3 ಲಕ್ಷ ರೂಪಾಯಿ ವೆಚ್ಚದಲ್ಲಿ ಬಾಡೂಟ ಆಯೋಜನೆ ಮಾಡಿದ್ದಾರೆ. 3 ರಿಂದ 4 ಸಾವಿರ ಜನರಿಗೆ ಚಿಕನ್ ಊಟದ ವ್ಯವಸ್ಥೆ ಮಾಡಿದ್ದಾರೆ.
james-kannada film Free Non Veg meals for James movie audience









