ಜೇಮ್ಸ್ vS RRR.. ಕರ್ನಾಟಕದಲ್ಲಿ ‘RRR’ ಗೆ ಸೋಲು… ???
ಒಂದೆಡೆ ಕರುನಾಡಿನ ಜನರ ಭಾವನೆಗಳ ಜೊತೆಗೆ ಮನಸ್ಸಿನ ಜೊತೆಗೆ ಎಮೋಷನಲ್ ಆಗಿ ಕನೆಕ್ಟ್ ಆಗಿರುವ ಸಿನಿಮಾ ಅಪ್ಪು ಅಭಿನಯದ ಪುನೀತ್ ರಾಜ್ ಕುಮಾರ್ ಅವರ ನಟನೆಯ ಕೊನೆ ಸಿನಿಮಾ ಜೇಮ್ಸ್..
ಈ ಸಿನಿಮಾ ಮಾರ್ಚ್ 17 ಕ್ಕೆ ಅಂದ್ರೆ ಅಪ್ಪು ಬರ್ತ್ ಡೇ ದಿನವೇ ರಿಲೀಸ್ ಆಗುವುದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಆದ್ರೆ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾಗೆ ಭಾರತ ಸಿನಿಮಾರಂಗದ ಬಹುನಿರೀಕ್ಷೆಯ RRR ಸಿನಿಮಾ ಫೈಟ್ ಕೊಡೋದಕ್ಕೆ ಸಜ್ಜಾಗ್ತಿದೆ..
ಹೌದು.. ಜನವರಿ 7ರಂದೆ ರಿಲೀಸ್ ಆಗಬೇಕಿದ್ದ RRR ಸಿನಿಮಾ ಕೊರೊನಾ ಕಾರಣಕ್ಕೆ ಪೋಸ್ಟ್ ಪೋನ್ ಆಯ್ತು.. ಇತ್ತೀಚೆಗೆ ನಿರ್ದೇಶಕ ರಾಜಮೌಳಿ ಅವರು 2 ಹೊಸ ಡೇಟ್ ಗಳನ್ನ ಅನೌನ್ಸ್ ಮಾಡಿದ್ದಾರೆ. ಒಂದು ಮಾರ್ಚ್ 18 ( ಜೇಮ್ಸ್ ರಿಲೀಸ್ ದಿನಾಂಕದ ಮರು ದಿನ).
James VS RRR – march 18 – wich cinema will go back
ಎರಡನೇಯದ್ದು ಏಪ್ರಿಲ್ 28. ಆದ್ರೆ ಮೂಲಗಳ ಪ್ರಕಾರ , ಟಾಲಿವುಡ್ ಅಂಗಳದ ಕಬರ್ ಪ್ರಕಾರ RRR ಬಹುತೇಕ ಮಾರ್ಚ್ 18 ಕ್ಕೆ ರಿಲೀಸ್ ಆಗಲಿದೆ ಎನ್ನಲಾಗ್ತಿದೆ.. ಹಾಗೊಂದ್ ವೇಳೆ RRR ಮಾರ್ಚ್ 18 ಕ್ಕೆ ರಿಲೀಸ್ ಆದಲ್ಲಿ ಕರ್ನಾಟಕದಲ್ಲಿ RRR ಗೆ ಸೋಲು ಪಕ್ಕಾ… ಯಾಕಂದ್ರೆ ಎಷ್ಟೇ ಬಿಗ್ ಬಜೆಟ್ ಪ್ಯಾನ್ ಇಂಡಿಯಾ , ಬಹುನಿರೀಕ್ಷೆಯ , ಕ್ರೇಜ್ ಹೆಚ್ಚಿರುವ ಸಿನಿಮಾವೇ ಆಗ್ಲಿ.. ಅಪ್ಪು ಸಿನಿಮಾ ಮುಂದೆ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ..
ಇನ್ನೂ RRR ಸಿನಿಮಾದಲ್ಲಿ ಜ್ಯೂನಿಯರ್ NTR ರಾಮ್ ಚರಣ್ ನಾಯಕರಾಗಿದ್ದಾರೆ. ಎಲ್ರಿಗೂ ಗೊತ್ತೇ ಇರೋ ಹಾಗೆ ಜ್ಯೂನಿಯರ್ NTR ಪುನೀತ್ ರಾಜ್ ಕುಮಾರ್ ಅವರ ಆತ್ಮೀಯ ಗೆಳೆಯ. ಅವರಿಗಾಗಿ ಗೆಳೆಯ ಗೆಳಯ ಹಾಡನ್ನೂ ಹಾಡಿದ್ದರು. NTR ಅವರು ಸಿನಿಮಾತಂಡದ ಜೊತೆಗೆ ಮಾತನಾಡಿ ರಿಲೀಸ್ ಡೇಟ್ ಮುಂದೂಡುವಂತೆ ಮಾಡಿದ್ರು ಅಚ್ಚರಿಯಿಲ್ಲ..