ಚಿಕ್ಕೋಡಿ: ಸಚಿವ ಜಮೀರ್ ಅಹ್ಮದ್ (Zameer Ahmed) ಓರ್ವ ಮತಾಂಧ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ವ್ಯಕ್ತಿಯನ್ನು ಸಭಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಕ್ಕೆ ಬಿಜೆಪಿ (BJP) ಶಾಸಕ ಕೈ ಮುಗಿಯುತ್ತಾರೆ ಎನ್ನುವ ಜಮೀರ್ ಹೇಳಿಕೆಗೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀರ್ ವಿರುದ್ಧ ಪ್ರಕರಣ ದಾಖಲಿಸಬೇಕು. ಸಭಾಧ್ಯಕ್ಷ ಸ್ಥಾನ ಅತ್ಯಂತ ಪವಿತ್ರವಾದದ್ದು. ಆ ಸ್ಥಾನದಲ್ಲಿ ಕೂತವರು ವ್ಯಕ್ತಿಯಲ್ಲ, ಅದೊಂದು ಶಕ್ತಿ. ಜಾತಿ, ಪಕ್ಷ, ಧರ್ಮ, ಭಾಷೆ ಬೇಧ ಅದಕ್ಕೆ ಇಲ್ಲ. ಆದರೆ, ಆ ಸ್ಥಾನವನ್ನು ಮುಸ್ಲಿಂ ಎಂದು ಗುರುತಿಸಿರಿವುದು ಅಪರಾಧ ಎಂದು ಹೇಳಿದ್ದಾರೆ.
ಕೂಡಲೇ ಜಮೀರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಹಾಕಬೇಕು ಎಂದು ಕಿಡಿಕಾರಿದ್ದಾರೆ. ಅಲ್ಲದೇ, ಜಮೀರ್ ಶಾಸಕ ಸ್ಥಾನ ರದ್ದಾಗುವವರೆಗೂ ಬಿಜೆಪಿ ಪ್ರತಿಭಟನೆ ನಡೆಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.