ಇಬ್ಬರು ಉಗ್ರರನ್ನು ಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು
ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜೊತೆ ಸಂಪರ್ಕ ಹೊಂದಿದ್ದ ಇಬ್ಬರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ವಸೀಮ್ ಎ ಗನೈ ಮತ್ತು ಇಕ್ಬಾಲ್ ಎ ಶೇಖ್ ಬಂಧಿತ ಭಯೋತ್ಪಾದಕರು. ಇವರನ್ನು ಇಂದು ಮುಂಜಾನೆ ಕಾಶ್ಮೀರದ ಬುದ್ಗಾಮ್‌ನ ಸುನ್ನೆರ್‌ಗುಂಡ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಬಂಧಿತ ಇಬ್ಬರೂ ಉಗ್ರರು ಶೋಪಯಾನ್‌ಗೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.
ಭಯೋತ್ಪಾದಕರಿಂದ ಚೈನೀಸ್ ಪಿಸ್ತೂಲ್, 2 ಪಿಸ್ತೂಲ್ ಮ್ಯಾಗಜೀನ್‌ಗಳು, 12 ಪಿಸ್ತೂಲ್ ರೌಂಡ್‌ಗಳು, 32 ಎಕೆ-47 ರೌಂಡ್‌ಗಳು ಸೇರಿದಂತೆ ಹಲವು ಸ್ಪೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.