ಜಮ್ಮು-ಕಾಶ್ಮಿರ ಯುವಕ 6 ಸೀಟುಗಳ ಏರ್ ಆ್ಯಂಬುಲೆನ್ಸ್ ಮಾಲಿಕ Saaksha Tv
ಜಮ್ಮು-ಕಾಶ್ಮೀರ: ಕಣಿವೆ ರಾಜ್ಯದ ಯುವಕನೊಬ್ಬ ತನ್ನದೇಯಾದ ವಿಮಾನ ಸಂಸ್ಥೆ ಪ್ರಾರಂಭಿಸಲಿದ್ದು, ಇದಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿಗದಿತವಲ್ಲದ ಪರವಾನಿಗೆ ಪಡೆದಿದ್ದಾರೆ.
J&K
ಯುವಕ ಜಮ್ಮುವಿನ ದಲ್ಪತಿಯ ಮೊಹಲ್ಲಾ ನಿವಾಸಿಯಾದ ಕ್ಯಾಪ್ಟನ್ ರೋಹನೀತ್ ಸಿಂಗ್ ರೈನಾ 6 ಸೀಟುಗಳ ಏರ್ ಆ್ಯಂಬುಲೆನ್ಸ್ Air Ambulance ಸ್ವತಃ ಹೊಂದಲು ಬಯಸಿದ್ದಾರೆ. ಅವರು ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪೂರ್ಣ ಪ್ರಮಾಣದ ಏರ್ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ.
ಇವರು ರೋಹನೀತ್ ಕೆನಡಾದ ವ್ಯಾಂಕೋವರ್‌ನಲ್ಲಿರುವ ಫ್ಲೈಟ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ತರಬೇತಿ ಸಮಯದಲ್ಲಿ ಒಬ್ಬರೇ 17 ಗಂಟೆ ಕಾಲ ವಿಮಾನ ಹಾರಾಟ ನಡೆಸಿ ಅತ್ಯುತ್ತಮ ಪೈಲಟ್ ಆಗಿದ್ದರು.