ಕಾಶ್ಮೀರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ
ಜಮ್ಮು ಕಾಶ್ಮೀರ : ಕಾಶ್ಮೀರದಲ್ಲಿ ಯೋಧರನ್ನು ಭೇಟಿಯಾದ ಪ್ರಧಾನಿ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೌಶೇರಾ ವಲಯದಲ್ಲಿರುವ ಯೋಧರನ್ನು ಗುರುವಾರ ಬೆಳಿಗ್ಗೆ ಭೇಟಿಯಾಗಿದ್ದರು. ನಂತರ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, “ನಾನು ಪ್ರಧಾನಿಯಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ. ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ತಂದಿದ್ದೇನೆ” ಎಂದಿದ್ದಾರೆ. ಅಲ್ಲದೇ ಈ ಸ್ಥಳಕ್ಕೆ ಬಂದಾಗ ನನ್ನ ಹೃದಯ ತುಂಬಿಬಂತು. ಈ ಸ್ಥಳವು ನಿಮ್ಮ ಶೌರ್ಯಕ್ಕೆ ಉದಾಹರಣೆಯಾಗಿದೆ. ನೌಶೇರಾದಲ್ಲಿ ನಡೆದ ಎಲ್ಲ ಪಿತೂರಿಗಳಿಗೂ ತಕ್ಕ ಉತ್ತರ ನೀಡಿದ್ದೀರಿ ಎಂದು ಯೋಧರನ್ನು ಶ್ಲಾಘಿಸಿದ್ದಾರೆ.
ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ. ಬುಧವಾರ ಜಮ್ಮುವಿನಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಾನೆ ಅವರನ್ನು ಮೋದಿ ಅವರು ಭೇಟಿಯಾದರು. ನಂತರ ಭದ್ರತಾ ಪಡೆಗಳಿರುವ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು. 2019ರಲ್ಲಿ ರಜೌರಿಯ ಸೇನಾ ಘಟಕದಲ್ಲಿ ಪ್ರಧಾನಿ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಈ ಬಾರಿ ನೌಶೆರಾದಲ್ಲಿ ಯೋಧರೊಂದಿಗೆ ಹಬ್ಬ ಆಚರಿಸುತ್ತಿದ್ದಾರೆ. ದೀಪಾವಳಿ ಅಂಗವಾಗಿ ಪ್ರಧಾನಿಯವರು ಭೇಟಿ ನೀಡಿರುವ ಫೋಟೊಗಳನ್ನು ಅಧಿಕೃತ ಮೂಲಗಳು ನೌಶೇರಾದ ಸೇನಾ ಪೋಸ್ಟ್‌ನಲ್ಲಿ ಹಂಚಿಕೊಂಡಿವೆ.