‘ಮಗನ ಕೊಂದ ಪಾಪಿ ಉಗ್ರರ ಕ್ಷಮಿಸಲು ಸಿದ್ಧ’..!
ಜಮ್ಮು ಕಾಶ್ಮೀರ : ತಮ್ಮ ಮಗನನ್ನ ಕೊಂದ ಉಗ್ರರನ್ನ ಕ್ಷಮಿಸಲು ನಾನು ಸಿದ್ಧವಿದ್ದೇನೆಂದು ಜಮ್ಮು ಕಾಶ್ಮೀರದ ಶ್ರೀನಗರದ ಹೋಟೆಲ್ ಮಾಲೀಕರು ಹೇಳಿಕೊಂಡಿದ್ದಾರೆ.
ಹೌದು.. ಪ್ರಸಿದ್ಧ ಕೃಷ್ಣ ಡಾಬಾ ಸಸ್ಯಾಹಾರಿ ರೆಸ್ಟೋರೆಂಟ್ ನ ಮಾಲೀಕ ರಮೇಶ ಕುಮಾರ್ ಅವರು ತಮ್ಮ ಮಗನ ಕೊಂದ ಪಾಪಿಗಳನ್ನ ಕ್ಷಮಿಸಲು ತಯಾರಿದ್ದಾರಂತೆ. ಅಲ್ಲದೇ ಮಗನ ಹಂತಕರನ್ನೂ ಬಿಡುಗಡೆ ಮಾಡಿದ್ರೂ ಕೂಡ ತಮಗೆ ಅಭ್ಯಂತರವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಫೆಬ್ರವರಿ 17ರಂದು ಸಂಜೆ ದುರ್ಗಾನಾಗ್ ಪ್ರದೇಶದಲ್ಲಿರುವ ಐಷಾರಾಮಿ ಉಪಹಾರ ಗೃಹದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಮೇಶ್ ಮಗ ಆಕಾಶ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಫೆಬ್ರವರಿ 28ರಂದು ಮೃತಪಟ್ಟಿದ್ದರು.
ಆಕಾಶ್ ಹತ್ಯೆ ಪ್ರಕರಣದ ಎರಡು ದಿನಗಳೊಳಗೆ ಆರೋಪಿಗಳಾದ ಮೂವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದರು.
ಇದೇ ವಿಚಾರವಾಗಿ ಮಾತನಾಡಿರುವ ರಮೇಶ್ , ಸರ್ಕಾರ ಅವರನ್ನು ಬಿಡುಗಡೆ ಮಾಡಲು ಬಯಸಿದರೂ ನನಗೆ ಯಾವುದೇ ಅಭ್ಯಂತರವಿಲ್ಲ. ಮಗನ ಹತ್ಯೆಯ ಹೊರತಾಗಿಯೂ ತಾವು ಹುಟ್ಟಿ ಬೆಳೆದ ಜಮ್ಮು ಕಾಶ್ಮೀರದ ಸುರಕ್ಷತೆ ನಮಗೆ ಮುಖ್ಯ ಎಂದು ಹೇಳಿದ್ದಾರೆ.
ರಂಜಾನ್ ಉಪವಾಸ ಆರಂಭ – ಆದ್ರೆ ಕೋವಿಡ್ ಗೈಡ್ ಲೈನ್ಸ್ ಫಾಲೋ ಮಾಡ್ಲೇ ಬೇಕು..!
ಅಲೆ ನಮ್ಮ ಕಡೆ ಇದೆ, ಗೆಲುವು ನಮ್ಮದೇ : ಸಿದ್ದರಾಮಯ್ಯ