ಟೆಕ್ನಾಲಾಜಿಯಲ್ಲಿ ವಿಶ್ವದ ದೊಡ್ಡಣ್ಣ , ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾದ ಜಪಾನ್ ನ ಬಗ್ಗೆ INTERESTING FACTS..!
ಇಡೀ ವಿಶ್ವಕ್ಕಿಂತ ಭಿನ್ನ , ಟೆಕ್ನಾಲಜಿಯಲ್ಲಿ ವಿಶ್ವದ ದೊಡ್ಡಣ್ಣ , ಏಷ್ಯಾದ ಅತ್ಯಂತ ಮುಂದುವರೆದ ದೇಶ , ಅತಿ ಹೆಚ್ಚು ಬಾರಿ ಪ್ರಕೃತಿ ವಿಕೋಪಕ್ಕೆ ತುತ್ತಾದ್ರೂ ಅಷ್ಟೇ ವೇಗವಾಗಿ ಮತ್ತೆ ಎದ್ದು ನಿಲ್ಲುವ ಛಲವಂತ ಈ ದೇಶ… ಇವತ್ತು ನಾವು ಮಾತನಾಡೋಕೆ ಹೊರಟಿರುವುದು ಜಪಾನ್ ಬಗ್ಗೆ..
ಹೌದು ಪ್ರಸ್ತುತ ಜಪಾನ್ ನ ಟೋಕ್ಯೋದಲ್ಲಿ 2021 ನೇ ಸಾಲಿನ ಒಲಂಪಿಕ್ಸ್ ಆಯೋಜನೆಗೊಂಡಿರುವುದು ಎಲ್ರಿಗೂ ಗೊತ್ತೇ ಇದೆ. ಜಪಾನ್.. ಈ ದೇಶ ಅನೇಕ ವೈವಿದ್ಯತೆಗಳು , ವಿಭಿನ್ನ ಸಂಗತಿಗಳಿಂದ ಜಗತ್ತಿನಲ್ಲಿ ತನ್ನ ಚಾಪು ಮೂಡಿಸಿದ್ದು , ಈ ದೇಶದ ಕೆಲವು ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ತಿಳಿಯೋಣ.
ಬಂಗಾಳವು, ಪಶ್ಚಿಮ ಬಂಗಾಳವಾದ ಹಿಂದಿನ ಇತಿಹಾಸ ಗೊತ್ತಾ…! INTERESTING FACTS
ಇಡೀ ವಿಶ್ವದಲ್ಲಿ ಬರ್ಗರ್ ಬ್ರೌನ್ ಬಣ್ಣದಲ್ಲಿದ್ದರೆ , ಇಲ್ಲಿ ಮಾತ್ರ ಕಪ್ಪು ಬಣ್ಣದಲ್ಲಿ ಸಿಗುತ್ತೆ.. ಆವಿಷ್ಕಾರ , ಟೆಕ್ನಾಲಜಿ ವಿಚಾರದಲ್ಲಿ ಜಪಾನ್ ಗೆ ಜಪಾನೇ ಸಾಟಿ. ಇಲ್ಲಿನ ಬುಲೆಟ್ ಟ್ರೈನ್ ಬಗ್ಗೆ ಹೇಳೋದೆ ಬೇಡ, 500 ಕಿಮೀ ಸ್ಪೀಡ್ ನಲ್ಲಿ ಓಡುತ್ತೆ. ೀ ರೀತಿ ಅನೇಕ ವಿಚಾರಗಳು ಜಪಾನ್ ಅನ್ನ ವಿಶ್ವ ಮಟ್ಟದಲ್ಲಿ ಬಲಿಷ್ಠ ದೇಶವಾಗಿ ಪರಿಚಯಿಸುತ್ತೆ…
ಭಾರತದ ಆಪ್ತಮಿತ್ರ ರಾಷ್ಟ್ರ , ವಿಶ್ವದ ಶಕ್ತಿಶಾಲಿ ರಾಷ್ಟ್ರ , ವಿಶ್ವದ ಅತಿ ದೊಡ್ಡ ರಾಷ್ಟ್ರ ರಷ್ಯಾದ..! INTERESTING FACTS
ಜಪಾನ್ ನ ಜನಸಂಖ್ಯೆ – ಸುಮಾರು 13 ಕೋಟಿ – ವಿಶ್ವದ 11 ನೇ ದೊಡ್ಡ ಜಜನಸಂಖ್ಯಾ ರಾಷ್ಟ್ರ
ಇಲ್ಲಿನ 92 % ಜನರು ನಗರಗಳಲ್ಲಿ ಇದ್ರೆ , ಉಳಿದವರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ.
ಉತ್ತರ ಕೊರಿಯಾ, ದಕ್ಷಿಣ ಕೊರಿಯಾ , ಚೈನಾ , ರಷ್ಯಾ , ಫಿಲಿಫೈನ್ಸ್ , ಮಾರಿಯಾನಾ ಐಲ್ಯಾಂಡ್ , ಥೈವಾನ್ ದೇಶಗಳೊಂದಿಗೆ ಜಪಾನ್ ಗಡಿ ಹಂಚಿಕೊಂಡಿದೆ. ಸರ್ವೇ ಅನುಸಾರ ಜಪಾನ್ ಜನರು ಅತಿ ಹೆಚ್ಚು ಆರೋಗ್ಯವಂತರು. ಅಲ್ಲದೇ ವಿಶ್ವದಲ್ಲಿ ಅತಿ ಹೆಚ್ಚು ಮಂದಿ ಬಹುಕಾಲ ಜೀವಿಸುವ ಜನರು ಎನ್ನಲಾಗಿದೆ.
ಜಪಾನ್ ನಲ್ಲಿ ಬಹುತೇಕ ಎಲ್ಲರೂ ಫಿಟ್ ಬಾಡಿ ಹೊಂದಿರುತ್ತಾರೆ.. ಸ್ಲಿಮ್ ಆಗಿರುತ್ತಾರೆ. ಸುಮೋ ರೆಸ್ಲರ್ ಗಳನ್ನ ಬಿಟ್ರೆ ಸಾಮಾನ್ಯವಾಗಿ ಜನರು ಮಿತಿ ಮೀರಿ ದಪ್ಪಗೆ ಇರುವುದು ತೀರಾ ಅಂದ್ರೆ ತೀರಾ ಕಡಿಮೆ.. ಯುವಕರು , ಮಕ್ಕಳು ಹಿರಿಯರು , ಮದ್ಯವಯಸ್ಕರು ಸಹ ಫಿಟ್ ಬಾಡಿಯನ್ನ ಹೊಂದಿರುತ್ತಾರೆ.. ಹಾಗಾದ್ರೆ ಇದರ ಪಸೀಕ್ರೇಟ್ ಏನು..?
ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!
ಇಲ್ಲಿನ ಜನರ ಆಹಾರ ಪದ್ಧತಿ ಅವರ ದೇಹದ ಆರೋಗ್ಯದ ಸಮತೋಲನವನ್ನ ಕಾಪಾಡುತ್ತದೆ.. ಇನ್ನೂ ಮುಖ್ಯವಾಗಿ ಇಲ್ಲಿನ ಪ್ರತಿ ಆಹಾರದ ಜೊತೆಗೂ ಗ್ರೀನ್ ಟೀ ಇದ್ದೇ ಇರುತ್ತೆ.. ಇಲ್ಲಿನ ಜನರು ಪ್ರತಿ ಆಹಾರದ ಜೊತೆಗೂ ಗ್ರೀನ್ ಟೀ ಸೇವನೆ ಮಾಡ್ತಾರೆ.. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಗ್ರೀನ್ ಟೀ ಸೇವನೆ ಮಾಡ್ತಾರೆ. ಇದು ಅವರ ದೈನಂದಿನ ಜೀವನದ ಅವಿಭಾಜ್ಯ ಅಂಗ ಅಂದ್ರೂ ತಪ್ಪಾಗಲ್ಲ.
ಗ್ರೀನ್ ಟೀ ಹೊರತಾಗಿ , ಜಪಾನ್ ನಲ್ಲಿ ಬಗೆ ಬಗೆಯ ಟೀ ಗಳನ್ನ ಕೂಡ ಜನರು ಹೆಚ್ಚಾಗಿ ಸೇವನೆ ಮಾಡ್ತಾರೆ.. ಯಾವುದೇ ಹಬ್ಬ ಹರಿದಿನವಿರಲಿ , ರಿಲ್ಯಾಕ್ಸ್ ಮೂಡ್ ಇರಲಿ ಇಲ್ಲಿನ ಜನರಿಗೆ ಟೀ ಬೇಕೆ ಬೇಕು.. ಆದ್ರೆ ಇಲ್ಲಿನ ಟೀ ಇಡೀ ವಿಶ್ವಕ್ಕಿಂತ ವಿಭಿನ್ನ ಕಾರಣ ಇಲ್ಲಿನ ಜನರು ಟೀ ಗೆ ಸಕ್ಕರೆ ಆಗಲಿ , ಹಾಲನ್ನ ಾಗಲಿ ಮಿಶ್ರಣ ಮಾಡದೇ ಸೇವನೆ ಮಾಡ್ತಾರೆ… ಇದೇ ಕಾರಣಕ್ಕೆ ಇಲ್ಲಿನ ಜನರು ಇಷ್ಟು ಫಿಟ್ ಆಗಿರುತ್ತಾರೆ..
ಇನ್ನೂ ಇಲ್ಲಿನ ಜನರು ಹೆಚ್ಚು ಆರೋಗ್ಯವಾಗಿರುವುದಕ್ಕೆ ಕಾರಣ , ಇವರು ಸೇವಿಸುವ ಆಹಾರ.. ಜಪಾನ್ ನ ಜನರು ಹೆಚ್ಚಾಗಿ ಸೀ ಫುಡ್ ಸೇವನೆ ಮಾಡ್ತಾರೆ.. ಸಮುದ್ರದಲ್ಲಿ ಸಿಗುವ ಸಪ್ಪು ಸದೆ ತರಕಾರಿ ಇಂದ ಹಿಡಿದು ಮೀನು , ಫ್ರಾನ್ಸ್ , ಹೀಗೆ ಸಮುದ್ರ ಜೀವಿಗಳನ್ನ ಸೇವನೆ ಮಾಡ್ತಾರೆ.. ಸಮುದ್ರದಲ್ಲಿ ಸಿಗುವ ಇವುಗಳ ನೆಲದ ಮೇಲೆ ಸಿಗುವ ಸಪ್ಪು ತರಕಾರಿ ಇತರೇ ಸೇವನೆಗೆ ಅರ್ಹವಾದ ವಸ್ತುಗಳಿಗಿಂರತಲೂ ಹೆಚ್ಚು ಪ್ರೋಟೀನ್ ಹೊಂದಿದ್ದು, ಶಕ್ತಿಯನ್ನೂ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ..
ವಿಶ್ವದ ಪ್ರಸಿದ್ಧ ಆಹಾರಗಳ ದೇಶ… ಸುಂದರ ಪ್ರವಾಸಿತಾಣಗಳ ಆಗರ ಇಟಲಿ…! Intersting facts
ಇನ್ನೂ ಇಡೀ ವಿಶ್ವಾದ್ಯಂತ ನೀರು ಸಂರಕ್ಷಣೆಗೆ ಸಾಕಷ್ಟು ಅಭಿಯಾನಗಳು , ಕಾರ್ಯಕ್ರಮಗಳು ನಡೆಯುತ್ತಿವೆ… ಆದ್ರೆ ಅಸಲಿಗೆ ಎಷ್ಟರ ಮಟ್ಟಿಗೆ ಪ್ರಯೋಜನವಾಗ್ತಿದೆ ಅನ್ನೋದು ಮುಖ್ಯ. ಆದ್ರೆ ಜಪಾನ್ ಈ ವಿಚಾರದಲ್ಲಿ ಇಡೀ ವಿಶ್ವಕ್ಕೆ ಮಾದರಿ. ಇಲ್ಲಿನ ಸರ್ಕಾರ , ಜನರು ನೀರು ಸಂರಕ್ಷಣೆಗೆ ಅತ್ಯಂತ ಮಹತ್ವವನ್ನ ನೀಡ್ತಾರೆ.. ಎಷ್ಟರ ಮಟ್ಟಿಗೆ ಅಂದ್ರೆ ಇಲ್ಲಿ ಪ್ರತಿ ಸ್ಥಳಗಳಲ್ಲಿ , ಮನೆಗಳಲ್ಲಿ ಟಾಯ್ಲೆಟ್ ನ ಫ್ಲಶ್ ಮತ್ತು ಸಿಂಕ್ ಅನ್ನ ಅಟ್ಯಾಚ್ ಮಾಡಲಾಗಿರುತ್ತೆ.. ಇದ್ರಿಂದಾಗಿ ಸಿಂಕ್ ನಲ್ಲಿ ಹ್ಯಾಂಡ್ ವಾಷ್ ಮಾಡಿದಾಗೆಲ್ಲಾ ಆ ನೀರು ಫ್ಲಶ್ ನಲ್ಲಿ ಶೇಖರಣೆಗೊಳ್ಳುತ್ತದೆ.. ಯಾರಾದ್ರೂ ಟಾಯ್ಕೆಟ್ ಉಪಯೋಗಿಸಿ ಫ್ಲಶ್ ಮಾಡಿದ್ರೆ ಅಲ್ಲಿ ಶೇಖರಣೆ ಗೊಂಡ ನೀರು ಟಾಯ್ಲೆಟ್ ಸ್ವಚ್ಛಗೊಳಿಸುತ್ತದೆ..
ಬ್ರೆಜಿಲ್.. ಅಮೇಜಾನ್ , ದಟ್ಟ ಕಾಡು , ಗಿಡಮರಗಳು, ಸಾಕಷ್ಟು ವಿಶೇಷತೆಗಳು , ವಿಭಿನ್ನತೆಯಿಂದ ಕೂಡಿರುವ ಸುಂದರ ದೇಶ… ! INTERESTING FACTS
ಇಲ್ಲಿನ ಜನರು ಅಪ್ಪಿ ತಪ್ಪಿ ಬೈ ಮಿಸ್ ಆಗಿ ಮತ್ತೊಬ್ಬರನ್ನ ಟಚ್ ಮಾಡಿದ್ರೂ 3 ಬಾರಿ ಸಾರಿ ಕೇಳಿ ಹೋಗ್ತಾರೆ.. ಇನ್ನೂ ಜಪಾನ್ ನಲ್ಲಿ ಕಡಲ್ ಕೆಫೆ ಅನ್ನೋ ಪಾರ್ಲರ್ ಸಿಕ್ಕಾಪಟ್ಟೆ ಫೇಮಸ್ ಇಲ್ಲಿ ಸುಂದರವಾದ ಮಹಿಳೆಯರು ಗ್ರಾಹರನ್ನ ರಿಲ್ಯಾಕ್ಸ್ ಆಗುವುದಕ್ಕೆ ಸಹಾಯ ಮಾಡ್ತಾರೆ.. ಅವರಿಗೆ ಮಸಾಜ್ ಮಾಡುತ್ತಾ ಎಮೋಷನಲ್ ಆಗಿ ಅವರ ಜೊತೆಗೆ ಕನೆಕ್ಟ್ ಆಗಗ್ತಾರೆ..
ಇನ್ನೂ ಜಪಾನ್ ನಲ್ಲಿ ಅನೇಕ ಸಂಪ್ರದಾಯಗಳು ನಮ್ಮ ಬಾರತವನ್ನ ಹೋಲುತ್ತೆ… ಇಲ್ಲಿನ ರೀತಿಯಲ್ಲಿ ಅಲ್ಲಿಯೂ ಕೂಡ ಯಾರನ್ನಾದ್ರೂ ಭೇಟಿಯಾಗೋದಾದ್ರೆ , ಅಷ್ಟೇ ಯಾಕೆ ತಮ್ಮ ಮನೆಗಳಿಗೆ ಹೋದರೂ ಹೊರಗಡೆ ಚಪ್ಪಲಿಗಳನ್ನ ಬಿಟ್ಟು ಮನೆಯೊಳಗಡೆ ಧರಿಸುವುದಕ್ಕಾಗಿಯೇ ಇರುವ ಚಪ್ಪಲಿಗಳನ್ನ ಧರಿಸಿ ಒಳಪ್ರವೇಶ ಮಾಡ್ತಾರೆ.. ಮಂದಿರಗಳಿಗೆ ಭೇಟಿ ನಿಡುವುದಾದ್ರೆ ಹೊರಗಡೆ ಚಪ್ಪಲಿಗಳನ್ನ ಬಿಟ್ಟು ಹೋಗ್ತಾರೆ.
ಇಡೀ ವಿಶ್ವದಲ್ಲಿ ಉತ್ತಮ ಎಜುಕೇಶನ್ ಸಿಸ್ಟಮ್ ಕೂಡ ಜಪಾನ್ ನದ್ದು ಅಂತಲೇ ಹೇಳಲಾಗುತ್ತೆ.. ಇಲ್ಲಿನ ಪುಸ್ತಕಗಳನ್ನ ಬೋಧನೆ ಮಾಡುವುದಕ್ಕಿಂತ ಪ್ರಾಕ್ಟಿಕಲ್ ಆಗಿ ಕಲಿಸುವುದಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.. ಜೊತೆಗೆ ಇಲ್ಲಿನ ಮಕ್ಕಳು ಖುದ್ದು ಕ್ಲಾಸ್ ರೂಮ್ ಗಳನ್ನ ಸ್ವಚ್ಛಗೊಳಿಸಬೇಕು.
ಈ ದೇಶದಲ್ಲಿನ ಮಸಾಜ್ ವರ್ಲ್ಡ್ ಫೇಮಸ್..! ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ..! ಇಲ್ಲಿನ ಆಚಾರ ವಿಚಾರಗಳು ಭಾರತಕ್ಕೆ ಭಿನ್ನವಾಗಿಲ್ಲ..!
ಇಡೀ ವಿಶ್ವದಲ್ಲಿ ಅತಿ ಹೆಚ್ಚು ಲಿಟ್ರೇಟೆಡ್ ರಾಷ್ಟ್ರವೂ ಕೂಡ ಜಪಾನ್.. ಇಲ್ಲಿನ ಲಿಟ್ರೆಸಿ ರೇಟ್ 100 %. ಇದು ಒಂದು ಮುಖ್ಯ ಕಾರಣ ಈ ದೇಶವನ್ನ ವಿಶ್ವದ ಅತಿ ಹೆಚ್ಚು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪರಿಗಣಿಸಲಾಗುತ್ತೆ.
ಇನ್ನೂ ಇತರೇ ದೇಶಗಳೆಂತೇಯೇ ಈ ದೇಶದಲ್ಲೂ ಡಾರ್ಕ್ ಸೈಡ್ ಗಳಿವೆ.. ಮುಖ್ಯವಾಗಿ ಈ ದೇಶದಲ್ಲಿ ಅತಿ ಹೆಚ್ಚು ಜನರು ಮಾನಸಿಕ ಖಿನ್ನತೆ / ಡಿಪ್ರೆಷನ್ ಗೆನಿಂದ ಬಳಲುತ್ತಾರೆ. ಇನ್ನೂ ಗಂಭೀರ ಪರಿಸ್ಥಿತಿಗೂ ತಲುಪಿ ಅನೇಕರು ಆತ್ಮಹತ್ಯೆಯ ದಾರಿಯನ್ನೂ ಹಿಡಿದಿದ್ದಾರೆ.. ಇದನ್ನ ಿಲ್ಲಿನ ಜನರು ಹಿಕಿಕಮೋರಿ ಅಂತ ಕರೆಯುತ್ತಾರೆ..
ಪ್ರವಾಸಿ ತಾಣಗಳು
ಮೊದಲಿಗೆ ವಿಶ್ವ ಪ್ರಸಿದ್ಧ ಟೋಕ್ಯೋ ಟವರ್ರ್ – ಇಲ್ಲಿಗೆ ಪ್ರವಾಸಕ್ಕೆ ಬಂದ್ರೆ ಮಿಸ್ ಮಾಡದೇ ನೋಲೇ ಬೇಕಾದ ತಾಣ. ಮೌಂಟ್ ಫೂಜಿ ಜಪಾನ್ ನ ಅತಿ ಸುಂದರ ರಮಣೀಯ ಹಾಗೂ ಅತಿ ಎತ್ತರವಾದ ಪರ್ವತ – ಇದು ಚಾರಣ ಅಥವ ಟ್ರಿಕಿಂಗ್ ಗೆ ಹೇಳಿ ಮಾಡಿಸಿದ ಸ್ಥಳ. ಗೋಲ್ಡನ್ ಪೆವಿಲಿಯನ್ , ಟೋಕ್ಯೋ ಡಿಸ್ನಿ ಲ್ಯಾಂಡ್ , ಟೊಡೇಜಿ ಟೆಂಪಲ್, ಮಿಯಾಜಿಮಾ ದ್ವೀಪ , ಕುಮಾನೋ ನಾಚಿ ತೈಶಿ.
ನಿಮ್ಮ ಕನಸಿನಲ್ಲಿ ಗಣಪತಿ ಬಂದರೆ ಅದರ ಅರ್ಥ ಏನು ಗೊತ್ತಾ..?