ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ : ಮೋದಿ ಜೊತೆ ಮಾತುಕತೆ
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಶನಿವಾರ ಭಾರತದ ರಾಜಧಾನಿ ನವದೆಹಲಿಯನ್ನು ತಲುಪಿದ್ದಾರೆ. ಅವರು ಭಾರತ-ಜಪಾನ್ ನಡುವಿನ 14 ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನರೇದ್ರ ಮೋದಿ ಅವರನ್ನ ಬೇಟಿ ಮಾಡಿ ಮಾತುಕತೆ ನಡಸಲಿದ್ದಾರೆ. ಉಭಯ ಪ್ರಧಾನಿಗಳ ನಡುವೆ ಉಕ್ರೇನ್ ಬಿಕ್ಕಟ್ಟು, ಚೀನಾ, ಹೂಡಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಈ ಸಮಯದಲ್ಲಿ, ಎರಡೂ ದೇಶಗಳು ಆರ್ಥಿಕ ಸಹಕಾರವನ್ನು ಹೆಚ್ಚಿಸುವುದರ ಜೊತೆಗೆ ಇಂಡೋ-ಪೆಸಿಫಿಕ್ ಪ್ರದೇಶದ ಮಾತುಕತೆಗಳ ಬಗ್ಗೆ ಚರ್ಚಿಸಬಹುದು. ಇದಲ್ಲದೆ, ಜಪಾನ್ ಸಮುದ್ರದಲ್ಲಿ ರಷ್ಯಾದ ವಾಯುಪಡೆಯೊಂದಿಗೆ ಜಂಟಿ ವಾಯು ವ್ಯಾಯಾಮ ಮತ್ತು ಸುಲು ಸಮುದ್ರದಲ್ಲಿ ಫಿಲಿಪೈನ್ಸ್ ಸಮುದ್ರದಲ್ಲಿ ಯುದ್ಧನೌಕೆಗಳನ್ನು ಕಳುಹಿಸುವ ಬಗ್ಗೆಯೂ ಚರ್ಚಿಸಲಾಗುವುದು. ಮರುದಿನ ಅಂದರೆ ಮಾರ್ಚ್ 20ರಂದು ಕಿಶಿದಾ ಕಾಂಬೋಡಿಯಾಗೆ ತೆರಳಲಿದ್ದಾರೆ.
ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಗಿನ ಜಪಾನ್ ಪ್ರಧಾನಿ ಶಿಂಜೋ ಅಬೆ ನಡುವಿನ ಸಭೆಯನ್ನು ಮುಂದೂಡಲಾಗಿತ್ತು. ಆ ಕಾರ್ಯಕ್ರಮದ ಭಾಗವೇ ಕಿಶಿದಾ ಅವರ ಈ ಭೇಟಿ.
ರಷ್ಯಾ ಕುರಿತು ಭಾರತ ಮತ್ತು ಜಪಾನ್ ಭಿನ್ನ ನಿಲುವು
ಜಪಾನ್ ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದರೆ, ಭಾರತ ಈ ಕುರಿತು ತಟಸ್ಥ ನಿಲುವು ತೆಗೆದುಕೊಂಡಿದೆ. ವಿಶ್ವಸಂಸ್ಥೆಯಲ್ಲೂ ಭಾರತ ರಷ್ಯಾ ವಿರುದ್ಧ ಮತ ಹಾಕಿರಲಿಲ್ಲ.
ಭಾರತ ಮತ್ತು ಜಪಾನ್ ನಡುವೆ ದೊಡ್ಡ ಪ್ರಮಾಣದ ಆಮದು-ರಫ್ತು ನಡೆಯುತ್ತದೆ. ಭಾರತ ಮುಖ್ಯವಾಗಿ ಬಟ್ಟೆಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ಪೆಟ್ರೋಲಿಯಂ ಉತ್ಪನ್ನಗಳು, ಜವಳಿ ನೂಲುಗಳು, ಬಟ್ಟೆಗಳು ಮತ್ತು ಯಂತ್ರೋಪಕರಣಗಳನ್ನು ಜಪಾನ್‌ಗೆ ರಫ್ತು ಮಾಡುತ್ತದೆ. ಮತ್ತೊಂದೆಡೆ, ಪ್ಲಾಸ್ಟಿಕ್, ವಿದ್ಯುತ್ ಯಂತ್ರೋಪಕರಣಗಳು, ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ವಾಹನ ಭಾಗಗಳು, ಸಾವಯವ ರಾಸಾಯನಿಕಗಳು ಮತ್ತು ಲೋಹಗಳು ಭಾರತ ಆಮದು ಮಾಡಿಕೊಳ್ಳುತ್ತದೆ. 2000 ರಿಂದ 2019 ರವರೆಗೆ ಭಾರತದಲ್ಲಿ ಜಪಾನಿ $ 32 ಬಿಲಿಯನ್ ಹೂಡಿಕೆಯನ್ನ ಮಾಡಿದೆ.








