ಗಾಯಾಳು ವೇಗಿ ಜಸ್ಪ್ರೀತ್ ಬುಮ್ರಾ 2023ರ ಐಪಿಎಲ್ನಲ್ಲಿ ಸಾರ್ವಜನಿಕವಾಗಿ ಮೊದಲ ಬಾರಿ ಕಾಣಿಸಿಕೊಂಡಿದ್ದಾರೆ.
ಗುಜರಾತ್ ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡವನ್ನು ಹುರಿದುಂಬಿಸಲು ಬಂದಿದ್ದ ಜಸ್ಪ್ರೀತ್ ಬುಮ್ರಾ ಎಲ್ಲರ ಗಮನ ಸೆಳೆದರು. ಮುಂಬೈ ತಂಡದ ಸೋಶಿಯಲ್ ಮೀಡಿಯಾ ಬೂಮ್ ಬೂಮ್ ಬುಮ್ರಾ ಎಂದು ಕ್ಯಾಪ್ಶನ್ ನೀಡಿದೆ.
ಬುಮ್ರಾ ಇತ್ತೀಚೆಗಷ್ಟೆ ನ್ಯೂಜಿಲೆಂಡ್ನಲ್ಲಿ ಬೆನ್ನು ನೋವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ. ಕಳೆದ ವರ್ಷ ಏಷ್ಯಾಕಪ್ ಹಾಗು ಟಿ20 ವಿಶ್ವಕಪ್ ಆಡಲು ಆಗಲಿಲ್ಲ.
ಸೆಪ್ಟೆಂಬರ್ 2022ರಂದು ಕೊನೆಯ ಬಾರಿಗೆ ಆಡಿದ್ದರು.ಬುಮ್ರಾ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆಗೆ ತಂಡಕ್ಕೆ ಮರಳಬಹುದೆಂದು ಹೇಳಲಾಗುತ್ತಿದೆ.