Jasprit Bumrah : 100 ವಿಕೆಟ್ ಗಳೊಂದಿಗೆ ಬುಮ್ರಾ ಅಪರೂಪದ ಸಾಧನೆ
ಟೀಂ ಇಂಡಿಯಾದ ಸ್ಟಾರ್ ಬೌಲರ್, ಸದ್ಯದ ಸ್ಟಾಡಿಂಗ್ ಕ್ಯಾಪ್ಟನ್ ಜಸ್ ಪ್ರೀತ್ ಬುಮ್ರಾ ಟೆಸ್ಟ್ ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಸೆನಾ ದೇಶಗಳಲ್ಲಿ ( ಸೌಥ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೆಲಿಯಾ) ಟೆಸ್ಟ್ ಗಳಲ್ಲಿ ನೂರು ವಿಕೆಟ್ ಪಡೆದ ಆರನೇ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ರಿ ಶೆಡ್ಯೂಲ್ಡ್ ಟೆಸ್ಟ್ ಪಂದ್ಯದಲ್ಲಿ ಓಪನರ್ ಜಾಕ್ ಕ್ರಾಲೆ ಅವರನ್ನು ಔಟ್ ಮಾಡುವ ಮೂಲಕ ಬುಮ್ರಾ ಈ ಸಾಧನೆ ಮಾಡಿದ್ದಾರೆ.

ಬುಮ್ರಾ ಇಲ್ಲಿಯವರೆಗೂ ಇಂಗ್ಲೆಂಡ್ ನೆಲದಲ್ಲಿ 36, ಆಸ್ಟ್ರೇಲಿಯಾ 32, ನ್ಯೂಜಿಲೆಂಡ್ ನಲ್ಲಿ ಆರು, ದಕ್ಷಿಣ ಆಫ್ರಿಕಾ ನೆಲದಲ್ಲಿ 26 ವಿಕೆಟ್ ಗಳನ್ನು ಪಡೆದಿದ್ದಾರೆ.
ಬುಮ್ರಾಗೂ ಮೊದಲು ಕಪಿಲ್ ದೇವ್, ಇಶಾಂತ್ ಶರ್ಮಾ, ಜಹೀರ್ ಖಾನ್, ಮೊಹ್ಮದ್ ಶಮಿ, ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು.
ಇನ್ನು ರೋಹಿತ್ ಶರ್ಮಾ ಕೊರೊನಾ ಸೋಂಕಿಗೆ ತುತ್ತಾದ ಕಾರಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ವೇಗಿ ಬುಮ್ರಾ ಮುನ್ನಡೆಸುತ್ತಿದ್ದಾರೆ.