Jasprit Bumrah | ಮರೆಯಬೇಡಿ ನಾವು ಐದು ಬಾರಿ ಚಾಂಪಿಯನ್

1 min read
jasprit-bumrah-reaction mi 5 losses saakshatv

Jasprit Bumrah | ಮರೆಯಬೇಡಿ ನಾವು ಐದು ಬಾರಿ ಚಾಂಪಿಯನ್

ಬೆಂಗಳೂರು : ನಾವು ಐದು ಬಾರಿ ಚಾಂಪಿಯನ್ ಆಗಿದ್ದೇವೆ ಎಂಬುದನ್ನು ಮರೆಯಬೇಡಿ. ನಾನು ಖಂಡಿತವಾಗಿಯೂ ಕಂ ಬ್ಯಾಕ್ ಮಾಡುತ್ತೇವೆ ಎಂದು ಮುಂಬೈ ಇಂಡಿಯನ್ಸ್ ತಂಡದ ವೈಸ್ ಕ್ಯಾಪ್ಟನ್ ಜಸ್ಪ್ರಿತ್ ಬುಮ್ರಾ ಹೇಳಿದ್ದಾರೆ.

ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ಕಳಪೆ ಪ್ರದರ್ಶನದ ಮೂಲಕ ಟೀಕೆಗಳಿಗೆ ಗುರಿಯಾಗಿದೆ. ಈ ಋತುವಿನಲ್ಲಿ ಮುಂಬೈ ಇದುವರೆಗೆ ಪಂದ್ಯ ಗೆದ್ದಿಲ್ಲ. ಆಡಿದ 5 ಪಂದ್ಯಗಳಲ್ಲಿ ಸೋತು ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಈ ಬಗ್ಗೆ ಬುಮ್ರಾ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ. “ಕ್ರಿಕೆಟ್ನಲ್ಲಿ ಪರಿವರ್ತನೆಯ ಹಂತ ಸಹಜ. ಪ್ರತಿಯೊಂದು ತಂಡವೂ ಒಂದಲ್ಲ ಒಂದು ಹಂತದಲ್ಲಿ ಆ ದಾರಿಯಲ್ಲಿ ಸಾಗಬೇಕಾಗುತ್ತದೆ.

jasprit-bumrah-reaction mi 5 losses saakshatv

ಇದೀಗ ಅದೇ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಹೊಸ ಕ್ರಿಕೆಟಿಗರು ತಂಡಕ್ಕೆ ಬಂದಿದ್ದಾರೆ.. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಯ ಹಿಡಿಯುತ್ತದೆ. ಅದನ್ನು ಬದಲಾಯಿಸುವ ಸಮಯ ಸಮೀಪಿಸುತ್ತಿದೆ.

ಒತ್ತಡದಲ್ಲಿದ್ದರೆ ಪಾಠ ಕಲಿಯುತ್ತೇವೆ. ಸರಣಿ ಸೋಲುಗಳು ನಮ್ಮನ್ನು ಕುಗ್ಗಿಸಿದರೂ ಅದರಿಂದ ಬಂದ ಅನುಭವದಿಂದ ಪಾಠ ಕಳಿಯುತ್ತೇವೆ.

ಮುಂಬರುವ ಪಂದ್ಯಗಳಿಂದ ನಮ್ಮ ಗೇಮ್ ಪ್ಲ್ಯಾನ್ ಬದಲಾಗಲಿದೆ. ಈ ಹಿಂದೆಯೂ ಇಂತಹ ಸನ್ನಿವೇಶಗಳು ಎದುರಾಗಿದ್ದವು ಎಂದಿದ್ದಾರೆ ಬುಮ್ರಾ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd