ಜಸ್ಪ್ರಿತ್ ಬೂಮ್ರಾಗೆ ಮದುವೆ ಸಂಭ್ರಮ…. ಸುದೀರ್ಘ ರಜೆಯಲ್ಲಿದ್ದಾರೆ ಸ್ಪೀಡ್ ಸ್ಟಾರ್…! @Jasprit Bumrah # team india @ bumrah married 

1 min read
Jasprit Bumrah saakshatv team india

ಜಸ್ಪ್ರಿತ್ ಬೂಮ್ರಾಗೆ ಮದುವೆ ಸಂಭ್ರಮ…. ಸುದೀರ್ಘ ರಜೆಯಲ್ಲಿದ್ದಾರೆ ಸ್ಪೀಡ್ ಸ್ಟಾರ್…! @Jasprit Bumrah # team india @ bumrah married 

Jasprit Bumrah saakshatv team indiaಜಸ್ಪ್ರಿತ್ ಬೂಮ್ರಾ.. ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್. ಆದ್ರೆ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಬೂಮ್ರಾ ಅವರು ಅಲಭ್ಯರಾಗಿದ್ದಾರೆ.
ಮೇಲ್ನೋಟಕ್ಕೆ ಜಸ್ಪ್ರಿತ್ ಬೂಮ್ರಾ ಅವರು ವೈಯಕ್ತಿಕ ಕಾರಣ ನೀಡಿ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಕುರಿತಂತೆ ಬಿಸಿಸಿಐನಿಂದಲೂ ಅನುಮತಿ ಪಡೆದುಕೊಂಡಿದ್ದಾರೆ. ಅಲ್ಲದೆ ಬಿಸಿಸಿಐ ಜಸ್ಪ್ರಿತ್ ಬೂಮ್ರಾಗೆ ವಿಶ್ರಾಂತಿಯ ನೆಪದಲ್ಲಿ ರಜೆಯನ್ನು ನೀಡಿತ್ತು.
ಆದ್ರೆ ಅಸಲಿ ಕಾರಣ ಏನು ಅಂದ್ರೆ ಜಸ್ಪ್ರಿತ್ ಬೂಮ್ರಾ ಮದುವೆಯಾಗುತ್ತಿದ್ದಾರೆ. ಹೀಗಾಗಿ ಮದುವೆ ಸಿದ್ಧತೆಗೋಸ್ಕರ ಜಸ್ಪ್ರಿತ್ ಬೂಮ್ರಾ ರಜೆಯಡಿಯಲ್ಲಿ ತೆರಳಿದ್ದಾರೆ. 27ರ ಹರೆಯದ ಜಸ್ಪ್ರಿತ್ ಬೂಮ್ರಾ ತನ್ನ ಮದುವೆಯ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಬೂಮ್ರಾ ಅವರು ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮಾತ್ರವಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗಳಿಗೂ ಅಲಭ್ಯರಾಗಲಿದ್ದಾರೆ.
ಈಗಾಗಲೇ ಜಸ್ಪ್ರಿತ್ ಬೂಮ್ರಾ ಅವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಆಡಿರಲಿಲ್ಲ. ಅಲ್ಲದೆ ಚೆನ್ನೈ ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಪಡೆದಿರಲಿಲ್ಲ. ಸದ್ಯದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ Jasprit Bumrah saakshatv team india ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಗಳನ್ನು ಮಾತ್ರ ಬೂಮ್ರಾ ಪಡೆದುಕೊಂಡಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd