ಜಾತಿಗೊಂದು ಪ್ರಾಧಿಕಾರ ಮಾಡುತ್ತಾ ಹೋದ್ರೆ ಮಿತಿನೇ ಇರಲ್ಲ: ಸಿದ್ದಗಂಗಾ ಶ್ರೀ
ತುಮಕೂರು : ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಸರ್ಕಾರದ ಈ ನಿರ್ಧಾರದ ಬಗ್ಗೆ ಸಿದ್ಧಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿ, ಜಾತಿಗೊಂದು ಪ್ರಾಧಿಕಾರ ಮಾಡುತ್ತಾ ಹೋದರೇ ಅದಕ್ಕೆ ಮಿತಿನೇ ಇರಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿರುವುದು ಕೇಳಿ ನನಗೆ ಆಶ್ಚರ್ಯ ಎನಿಸುತ್ತದೆ.
ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ನನ್ನ ಪ್ರಕಾರ ಎಲ್ಲ ಜಾತಿಯಲ್ಲೂ ಹಿಂದುಳಿದವರಿದ್ದಾರೆ.
ಎಲ್ಲ ಸಮಾಜದಲ್ಲಿಯೂ ಕಡುಬವರು ಇದ್ದಾರೆ. ಹೀಗಾಗಿ ಸರ್ಕಾರ ನಿಗಮ ಸ್ಥಾಪನೆಗೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಮಾಡಿದರೆ ಒಳಿತು ಎಂದು ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.
ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯಲ್ಲಿ ತಪ್ಪೇನು : ಸಿ.ಟಿ.ರವಿ
ಇನ್ನು ಸರ್ಕಾರ ಇರುವುದು ಸಮಗ್ರ ರಾಜ್ಯದ ಅಭಿವೃದ್ಧಿಗಾಗಿ. ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗದಲ್ಲಿ ಅವಕಾಶ ಕೊಡುವ ವ್ಯವಸ್ಥೆ ಕಲ್ಪಿಸಿ ಕೊಟ್ಟರೆ ತುಂಬಾ ಸಂತೋಷ.
ಒಂದು ಜಾತಿಗಾಗಿ ಪ್ರಾಧಿಕಾರ ಮಾಡಿದರೆ ಮುಂದೆ ಪ್ರತಿಯೊಬ್ಬರೂ ಕೇಳುತ್ತಾರೆ ಎಂದು ಸರ್ಕಾರಕ್ಕೆ ಶ್ರೀಗಳು ಸಲಹೆ ನೀಡಿದ್ದಾರೆ.
ಡಿಸೆಂಬರ್ 05 ರಂದು ಕರ್ನಾಟಕ ಬಂದ್..?
ಇನ್ನು ಇತ್ತೀಚೆಗೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿದ್ದ ಬಿಎಸ್ ವೈ ಇಂದು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮಂಗಳವಾರ ಆದೇಶ ಹೊರಡಿಸಿದ್ರು.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರಿದ್ದು, ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಲಾಗುತ್ತಿದೆ ಎಂದಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










