ಜಯಕರ್ನಾಟಕ ಜನಪರ ವೇದಿಕೆ ನಡೆ ನಿಸರ್ಗದ ಕಡೆ..!

1 min read

ಜಯಕರ್ನಾಟಕ ಜನಪರ ವೇದಿಕೆ ನಡೆ ನಿಸರ್ಗದ ಕಡೆ..!

ಪ್ರತಿ ಘಳಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಲು ಆತೋರೆಯುವ ಜಯಕರ್ನಾಟಕ ಜನಪರ ವೇದಿಕೆ ಇದೀಗ ನಮ್ಮ ನಡೆ ನಿಸರ್ಗದ ಕಡೆ ಎನ್ನುತ್ತಾ ಒಂದು ಕೆರೆಯನ್ನು ದತ್ತು ಪಡೆದು ಸ್ವಚ್ಛಗೊಳಿಸಿದೆ. ಮಿಂಚಿನ ವೇಗದಲ್ಲಿ ಓಡುತ್ತಿರುವ ಈ ಜಗತ್ತಿನಲ್ಲಿ ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಕೆರೆಗಳು ಕಣ್ಣಮುಂದೆಯೇ ಕಾಣೆಯಾಗುತ್ತವೆ. ಸಾಕಷ್ಟು ಅನುಕೂಲಗಳಿಗೆ ಕಾರಣವಾಗಿರುವ ಕೆರೆಗಳು ನೋಡ ನೋಡುತ್ತಿದ್ದಂತೆ ಮಯಾವಾಗುತ್ತಿರುವುದು ಆತಂಕಕಾರಿ ಸಂಗತಿ. ಇದರ ಪರಿಣಾಮವನ್ನು ಸೂಕ್ಷ್ಮವಾಗಿ ಮನಗಂಡಿರುವ ಜಯಕರ್ನಾಟಕ ಜನಪರ ವೇದಿಕೆ, ಮನೆಗೊಂದು ಮರ ಊರಿಗೊಂದು ಕೆರೆ ಎಂಬ ಶೀರ್ಷಿಕೆಗೆಯಡಿ ನಮ್ಮ ನಡೆ ನಿಸರ್ಗದ ಕಡೆ ಎಂಬ ಅಭಿಯಾನ ಆರಂಭಿಸಿದೆ.

ಅದರಂತೆ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ ರವರ ಆದೇಶದ ಮೇರೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಐ ಕೇರ್ ಬ್ರಿಗೇಡ್ ಸಂಸ್ಥೆಯ ಸಹಯೋಗದೊಂದಿಗೆ ಮತ್ತು ಕೆರೆ ಸಂರಕ್ಷಕರು ಹಾಗೂ ಪರಿಸರವಾದಿಗಳು ಆದಂತಹ ಆನಂದ್ ಮಲ್ಲಿಗವಾಡ ರವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಆರ್ ಚಂದ್ರಪ್ಪ ರವರ ಅಧ್ಯಕ್ಷತೆಯಲ್ಲಿ ಹಾಗೂ ಬೆಂ ಜಿಲ್ಲಾ ಅಧ್ಯಕ್ಷರಾದ ಜೆ. ಶ್ರೀನಿವಾಸ ರವರ ಸಾರತ್ಯದಲ್ಲಿ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡಗಲಹಟ್ಟಿ ಕೆರೆ ಅಭಿವೃದ್ಧಿ ಮಾಡಲು ಜಯಕರ್ನಾಟಕ ಜನಪರ ವೇದಿಕೆ ಕಂಕಣ ಕಟ್ಟಿಕೊಂಡಿದೆ. ಅದರ ಭಾಗವಾಗಿ ಕೆರೆಯನ್ನು ದತ್ತು ಪಡೆದು ಕೆರೆಯ ಸುತ್ತಲು ಸುಮಾರು 2500 ಗಿಡಗಳನ್ನು ಹಾಕಲು ನಿರ್ಧರಿಸಿದ್ದು, ಈಗಾಗಲೇ 300 ಗಿಡಗಳನ್ನು ನೆಟ್ಟಿದೆ.

Jayakarnataka janapara vedike

ಇದೇ ಸಂದರ್ಭದಲ್ಲಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಜೀವದ ಹಂಗು ತೊರೆದು ಕೊರೊನಾ ಹೋರಾಡುತ್ತಿರುವ ಕೊರೊನಾ ವಾರಿಯರ್ಸಆದ ಪಂಚಾಯ್ತಿ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೂ ಸಹ ದಿನಸಿ ಕಿಟ್ ವಿತರಣೆ ಮಾಡಿದೆ.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಾದ ಶ್ರೀಮತಿ ಮಮತಾ, ಕಾರ್ಯದರ್ಶಿ ಗಳಾದ ಗೋಪಾಲರವರು, ಯಲಹಂಕ ತಾಲೂಕು ಪಂಚಾಯತಿ ಉಪಾಧ್ಯಕ್ಷರಾದ ಶ್ರೀ ಮತಿ ಸುಜಾತ ಶ್ರೀನಿವಾಸ ರವರು, ಅಂತಮಾಲಜಿಸ್ಟ್ ಲಿಮ್ಕ ರೆಕಾರ್ಡ್ ಪಡೆದಿರುವ ಯತಾರ್ತ್ ಮೂರ್ತಿ, ಐ ಕೇರ್ ಬ್ರಿಗೇಡ್ ಸಂಸ್ಥೆಯ ಪ್ರಸಾದ್, ಪೂರ್ಣಿಮ, ಸ್ಪೂರ್ತಿ, ಶಿಲ್ಪ ಜಯಕರ್ನಾಟಕ ಜನಪರ ವೇದಿಕೆಯ ಮಹಾ ಪ್ರಧಾನ ಸಂಚಾಲಕರಾದ ಶೇ ಬೋ ರಾಧಾ ಕೃಷ್ಣ, ಉಪಾಧ್ಯಕ್ಷರಾದ ಉದಯಶೆಟ್ಟಿ, ಆತ್ಮಾನಂದ, ಸಂಘಟನಾ ಕಾರ್ಯದರ್ಶಿಗಳಾದ ಬಾಲಚಂದ್ರ ಪಿಳ್ಳೈ,ಯೋಗೇಶ್ ಬಾಬು, ಮಾಜಿ ಅಧ್ಯಕ್ಷರಾದ ಶ್ರೀ ಹೆಚ್. ಬಿ. ಹರೀಶ್ ಕುಮಾರ್ ರವರು ಮತ್ತು ಕೋಡಗಲಹಟ್ಟಿ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd