ಮಾ.23 ರಿಂದ ಏ.11ರವರಗೆ ಶರಣು ಶರಣಾರ್ಥಿ ಯಾತ್ರೆ : ಜಯಮೃತ್ಯುಂಜಯ ಶ್ರೀ

1 min read
Jayamrityunjaya Shri

ಮಾ.23 ರಿಂದ ಏ.11ರವರಗೆ ಶರಣು ಶರಣಾರ್ಥಿ ಯಾತ್ರೆ : ಜಯಮೃತ್ಯುಂಜಯ ಶ್ರೀ

ಬೆಂಗಳೂರು : ಪಂಚಮಸಾಲಿಗಳಿಗೆ 2ಎ ಮೀಸಲು ನೀಡಬೇಕೆಂಬ ಹೋರಾಟ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಮೀಸಲು ನೀಡೋದಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮನವಿ ಮಾಡಿದ್ದರು.ವಿಧಾನಸಭೆಯಲ್ಲಿ ಸಿಎಂ ಕೂಡ ಭರವಸೆ ನೀಡಿದ್ದಾರೆ. ಹಾಗಾಗಿ ನಾವು ತಾತ್ಕಾಲಿಕವಾಗಿ ಧರಣಿ ಸತ್ಯಾಗ್ರಹ ಸ್ಥಗಿತಗೊಳಿಸಿದ್ದೇವೆ. ಆದ್ರೆ ಹೋರಾಟ ನಿರಂತರವಾಗಿರುತ್ತದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿಗಳಿಗೆ 2ಎ ಮೀಸಲು ನೀಡಬೇಕೆಂಬ ಹೋರಾಟ ಮೊದಲ ಹಂತದಲ್ಲಿ ಯಶಸ್ವಿಯಾಗಿದೆ. ಮೀಸಲು ನೀಡೋದಕ್ಕೆ ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮನವಿ ಮಾಡಿದ್ದರು. ವಿಧಾನಸಭೆಯಲ್ಲಿ ಸಿಎಂ ಕೂಡ ಭರವಸೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಮಾತಿಗೆ ತಪ್ಪಿದ್ರೆ ಸೆಪ್ಟಂಬರ್ 15ಕ್ಕೆ ಮತ್ತೆ ಸತ್ಯಾಗ್ರಹ ಶುರು ಮಾಡುತ್ತೇವೆ. 20ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

Jayamrityunjaya Shri

ಇನ್ನ ಮೀಸಲಾತಿ ಘೋಷಣೆ ಆಗುವವರೆಗೆ ಬಸವಕಲ್ಯಾಣಕ್ಕೆ ತೆರಳೋದಿಲ್ಲವೆಂದು ಘೋಷಣೆ ಮಾಡಿದ್ದೆವು. ಆದರೆ ಚುನಾವಣೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ಮುಖಂಡರ ಮನವಿ ಮೇರೆಗೆ ವಾಪಸ್ ತೆರಳುತ್ತಿದ್ದೇವೆ. ನಾವು ಪಾದಯಾತ್ರೆ ಮೂಲಕ ಬಂದ ಮಾರ್ಗದಲ್ಲೇ ಶರಣು ಶರಾಣಾರ್ಥಿ ಯಾತ್ರೆ ಮೂಲಕ ವಾಪಸ್ ತೆರಳುತ್ತೇವೆ. ಮಾರ್ಚ್ 23ರಿಂದ ಏಪ್ರಿಲ್ 11ರವರಗೆ ಶರಣು ಶರಣಾರ್ಥಿ ಯಾತ್ರೆ ನಡೆಸುತ್ತಿದ್ದೇವೆ.

ಮಾರ್ಚ್ 23ರಂದು ಬೆಂಗಳೂರಿನಲ್ಲಿ ಕಿತ್ತೂರು ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಸ್ಕರಿಸಿ ಶರಣು ಶರಣಾರ್ಥಿ ಯಾತ್ರೆ ಪ್ರಾರಂಭಿಸುತ್ತೇವೆ. ನೆಲಮಂಗಲ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ, ಯಲಬುರ್ಗಾ, ಕೊಪ್ಪಳ, ರಾಯಚೂರು, ಯಾದಗಿರಿ, ಬಸವಕಲ್ಯಾಣ, ಕಲ್ಬುರ್ಗಿ, ವಿಜಯಪುರ, ಚಿಕ್ಕೋಡಿ, ಬೆಳಗಾವಿ, ಚನ್ನಮ್ಮನ ಕಿತ್ತೂರು, ಬೈಲಹೊಂಗಲ, ಧಾರವಾಡದ ಮಾರ್ಗವಾಗಿ ಕೂಡಲ ಸಂಗಮ ತಲುಪುತ್ತದೆ ಎಂದು ತಿಳಿಸಿದರು.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd