ಅಭಿನಯ ಶಾರದೆ , ಖ್ಯಾತ ನಟಿ ಜಯಂತಿ ಇನ್ನಿಲ್ಲ
ಚಂದನವನದ ಹಿರಿಯ ಸ್ಟಾರ್ ನಟಿ , ಅಭಿನಯ ಶಾರದೆ ಜಯಂತಿ ವಿಧಿವಶರಾಗಿದ್ದಾರೆ. 76 ವರ್ಷ ವಯಸ್ಸಾಗಿದ್ದ ಜಯಂತಿ ಅವರು ಕೆಲ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ದಕ್ಷಿಣ ಬಾರತದಲ್ಲಿ ಸಾಕಷ್ಟು ಸಿನಿಮಾಗಳನ್ನ ಮಾಡಿದ್ದ ಜಯಂತಿ ಅವರು , ಕನ್ನಡ , ತಮಿಳು , ತೆಲುಗು , ಮಳಯಾಳಂ , ಹಿಂದಿ, ಮಳಯಾಳಂ ಹೀಗೆ ಬಹುತೇಕ ಬಾಷೆಗಳಲ್ಲಿ ಮಿಂಚು ಹರಿಸಿ ಅಭಿನಯ ಶಾರದೆ ಎಂದೇ ಖ್ಯಾತಿ ಗಳಿಸಿದ್ದರು. ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲ ಕನ್ನಡದಲ್ಲೇ ಜಯಂತಿ ಅವರು ನೂರಾರು ಸಿನಿಮಾಗಳನ್ನ ಮಾಡಿದ್ದಾರೆ.. ವರ ನಟ ಡಾ ರಾಜ್ ಕುಮಾರ್ ಅವರ ಜೊತೆಗೆ 45 ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದಾರೆ.
1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್ನಲ್ಲಿ ಬೆಳೆದರು.
ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ `ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇದು ಜಯಂತಿ ಅವರ ಜೀವನವನ್ನೇ ಬದಲಾಯಿಸಿಬಿಟ್ಟಿತು.. ಪುಟ್ಟಸ್ವಾಮಿ ಅವರು ಕಮಲಾ ಕುಮಾರಿಗೆ ಜಯಂತಿ ಎಂದು ಮರುನಾಮಕರಣ ಮಾಡಿದರು.. ಇಲ್ಲಿಂದ ಜಯಂತಿ ಅವರ ಸ್ಟಾರ್ ಚೇಂಜ್ ಆಯಿತು.. ಸದ್ಯ ಇಂತಹ ಮೇರು ನಟಿ ನಿಧನಕ್ಕೆ ಸ್ಯಾಂಡಲ್ ವುಡ್ ತಾರೆಯರು ವಿವಿಧ ಕ್ಷೇತ್ರಗಳ ಗಣ್ಯರು , ಆಪ್ತರು , ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.