ರಾತ್ರೋ ರಾತ್ರಿ ಘರ್ಜಿಸಿದ ಜೆಸಿಬಿ – ಹಾಸನ ತಾಲೋಕು ಕಛೇರಿ ನೆಲಸಮ
ಹಾಸನದಲ್ಲಿ ರಾತ್ರೋರಾತ್ರಿ ಜೆಸಿಬಿಗಳು ಘರ್ಜಿಸಿದ್ದು ತಾಲೋಕು ಕಛೇರಿ ಕಟ್ಟಡವನ್ನ ನೆಲಸಮಗೊಳಿಸಲಾಗಿದೆ. ನೂತನ ತಾಲೋಕು ಕಛೇರಿ ನಿರ್ಮಾಣಕ್ಕಾಗಿ ಹಾಸನದ ಬಿ ಎಂ ರಸ್ತೆಯಲ್ಲಿದ್ದ ತಾಲೋಕು ಕಛೇರಿಯನ್ನ ನೆಲಸಮಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸನದಲ್ಲಿ ಟ್ರಕ್ ಟರ್ಮಿನಲ್ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಿದ್ದು, ತಾಲೋಕು ಕಛೇರಿಯನ್ನ ಕೆಡವಲು ಬಿಡುವುದಿಲ್ಲ ಎಂದು ಹೆಚ್ ಡಿ ರೇವಣ್ಣ ತೊಡೆತಟ್ಟಿದ್ದರು. ಹೀಗಾಗಿ ರಾತ್ರೋ ರಾತ್ರಿ 2 ಹಿಟಾಚಿ ಮೂಲಕ ಕಿಟಕಿ ಬಾಗಿಲು ಸಮೇತ ಕಛೇರಿ ಕಟ್ಟಡವನ್ನ ಕಡವಿ ಹೆಚ್ ಡಿ ರೇವಣ್ಣಗೆ ಟಾಂಗ್ ನೀಡಲಾಗಿದೆ.
ನಿನ್ನೆ ಟ್ರಕ್ ಟರ್ಮಿನಲ್ ವಿಚಾರವಾಗಿ ಕಾಮಗಾರಿಯನ್ನ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು ಹೀಗಾಗಿ ಜಿಲ್ಲಾಧಿಕಾರಿಗಳು ಸೆಕ್ಷನ್ 144 ಜಾರಿ ಮಾಡಿ ಆದೇಶಿಸಿದ್ದರು. ಶಾಸಕ ಪ್ರೀತಂ ಗೌಡ ಮತ್ತು ಹೆಚ್ ಡಿ ರೇವಣ್ಣ ನಡುವಿನ ಗುದ್ದಾಟ ಮುಂದುವರೆದಿದೆ.
JCB roars overnight – Hassan Taluk office demolished








