JDS ಅಧ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

1 min read

JDS ಅಧ್ಯಕ್ಷರಾಗಿ ಸಿ.ಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

ಬೆಂಗಳೂರು : ಇತ್ತೀಚೆಗಷ್ಟೇ ಕಾಂಗ್ರೆಸ್ ಗೆ ಟಾಟಾ ಗುಡ್ ಬೈ  ಹೇಳಿದ್ದ ಸಿಎಂ ಇಬ್ರಾಹಹಿಂ ಅವರು ಜೆಡಿಎಸ್ ಕೈ ಹಿಡಿಯಲಿದ್ದಾರೆ ಅನ್ನೋ ಪುಕಾರ್ ಎದ್ದಿತ್ತು.. ಆ ನಂತರ ಜೆಡಿಎಸ್ ಸೇರಿದ ಅವರು ಇದೀಗ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಎಲ್ಲರೂ ಉಬ್ಬೇರಿಸುವಂತೆ ಮಾಡಿದ್ದಾರೆ.

ಮಾಜಿ ಪ್ರಧಾನಿ, ಪಕ್ಷ ವರಿಷ್ಠ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಪಕ್ಷದ ಧ್ವಜ, ಪಕ್ಷದ ಶಾಲು ಹಾಕಿ ಇಬ್ರಾಹಿಂ ಅವರಿಗೆ ಅಧಿಕಾರ ನೀಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿಯವರು ಸಿಎಂ ಇಬ್ರಾಹಿಂಗೆ ಅಧಿಕಾರ ಹಸ್ತಾಂರಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆ ಸಮಯ ನೋಡಿ ಹೆಚ್‍ಡಿಡಿ ಅಧಿಕಾರ ಹಸ್ತಾಂತರ ಮಾಡಿದರು.

ಇದೇ ವೇಳೆ ಹೆಚ್.ಕೆ. ಕುಮಾರಸ್ವಾಮಿ ಅವರಿಂದ ರಾಜ್ಯಾಧ್ಯಕ್ಷ ಸ್ಥಾನ ವಾಪಸ್ ಪಡೆದು  ಜೆಡಿಎಸ್ ಸಂಸದೀಯ ಮಂಡಳಿಯ ಅಧ್ಯಕ್ಷರಾಗಿ ಅವರಿಗೆ ಅಧಿಕಾರ ನೀಡಲಾಯ್ತು..

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್‍ಡಿಕೆ, ರಾಜಕೀಯದ ಬೆಳವಣಿಗೆ ಹಿನ್ನೆಲೆಯಲ್ಲಿ ಇಬ್ರಾಹಿಂ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದೇವೆ. ಎಲ್ಲರೂ ಚರ್ಚೆ ಮಾಡಿಯೇ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ..

Hubli : ಧರ್ಮ ಧರ್ಮಗಳ ನಡುವೆ ಸಾಮರಸ್ಯ ಕದಡುವುದು ಕೆಟ್ಟ ಪ್ರವೃತ್ತಿ – ಹೆಚ್ ಡಿಕೆ

Accident : ಬಸ್ – ಕರ್ ನಡುವೆ ಡಿಕ್ಕಿ 24 ಮಂದಿಗೆ ಗಾಯ , ಮೂವರ ಸ್ಥಿತಿ ಚಿಂತಾಜನಕ

Hubballi voilence : ಬೂದಿ ಮುಚ್ಚಿದಂತಾದ ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd