JDS | 104 ಕ್ಷೇತ್ರದಲ್ಲಿ ಹೆಚ್ ಡಿಕೆ ಪಂಚರತ್ನ ರಥಯಾತ್ರೆ
ಬೀದರ್ : 104 ಕ್ಷೇತ್ರದಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೀದರ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, 104 ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲ್ಲಿದೆ. ಈ ರಥಯಾತ್ರೆ ಮೂಲಕ ಆಯಾ ಕ್ಷೇತ್ರ ಸಭೆಗಳು, ಗ್ರಾಮ ವಾಸ್ತ್ಯವ ಕೂಡಾ ಮಾಡಲಿದ್ದೇನೆ.
ನಿನ್ನೆ ಇಡೀ ದಿನ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರ ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿದ್ದೇನೆ. ಹಿಂದಿನ ಸಮಿಶ್ರ ಸರ್ಕಾರದಲ್ಲಿ ನನಗೆ ಸ್ವಾತಂತ್ರ್ಯವಾಗಿ ನಿರ್ಧಾರ ತೆಗೆದುಕೊಳಲು ಆಗಿಲ್ಲ. ಹೀಗಾಗಿ ನಮ್ಮದೆ ಸ್ವಾತಂತ್ರ್ಯ ಸರ್ಕಾರ ರಾಜ್ತದಲ್ಲಿ ಅಧಿಕಾರಕ್ಕೆ ಬಂದಾಗ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಹಣದ ಕೊರತೆ ಇಲ್ಲ, ಕೇಂದ್ರ ಸರ್ಕಾರದ ಮುಂದು ಅನುದಾನ ಭೀಕ್ಷೆ ಪಾತ್ರೆ ಹಿಡಿದುಕೊಂಡು ನಿಲ್ಲುವದು ಅವಶ್ಯಕತೆ ಇಲ್ಲ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲ ಇದೇ ಎಂದು ತಿಳಿಸಿದರು.

ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಗೆ ಪಕ್ಷ ಸಂಘಟನೆಯ ಕೆಲಸ ಒಪ್ಪಿಸುತ್ತೇನೆ, ಚುನಾವಣೆ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಮಾಡಿದ್ದೇವೆ.
ಡಿಸೆಂಬರ್ ನಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಬಹುದು. ಹೀಗಾಗಿ ಪಕ್ಷ ಸಂಘಟನೆಗೆ ಹೆಚ್ವಿನ ಆದ್ಯತೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರಾವಳಿಯಲ್ಲಿ ನಡೆದ ಮೂರು ಕೊಲೆ ದುಃಖದ ಸಂಗಾತಿ. ನಾನು ಕೊಲೆಯಾದ ಈ ಮೂವರ ಮನೆಗೆ ಭೇಟಿ ಮಾಡುತ್ತೇನೆ, ಆ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ.
ಎನ್ ಐ ಎ ಗೆ ಪ್ರಕರಣ ಹಸ್ತಾಂತರ ಬಗ್ಗೆ ಈ ಹಿಂದೆ ಒಪ್ಪಿಸಿದ ಪ್ರಕರಣಗಳು ನಾಲ್ಕು ಐದು ವರ್ಷಗಳು ಕಳೆದ್ರೂ ಫಲಿತಾಂಶ ಬಂದಿಲ್ಲ. ಈ ಪ್ರಕರಣದಲ್ಲಿ ಸರ್ಕಾರ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಗೊತ್ತಿಲ್ಲ ಎಂದರು.








