Bangalore | ರಾಗಿ ಖರೀದಿ ಕಡಿತಕ್ಕೆ ವೈಎಸ್ ವಿ ದತ್ತಾ ಅಸಮಾಧಾನ
ಬೆಂಗಳೂರು : ರಾಗಿ ಖರೀದಿ ಕಡಿತಕ್ಕೆ ಜೆಡಿಎಸ್ ಮುಖಂಡ ವೈ ಎಸ್ ವಿ ದತ್ತಾ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. JDS leader Y S V datta Press meet saaksha tv
ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದತ್ತಾ, ಕರ್ನಾಟಕ ರಾಜ್ಯದ ಬಯಲು ಸೀಮೆಯ ರಾಗಿ ಬೆಳೆಗಾರರ ಸಮಸ್ಯೆ ಘನಘೋರವಾಗಿದೆ. ಸರ್ಕಾರದ ಆದೇಶದಿಂದ ರಾಗಿ ಬೆಳೆಗಾರ ರೈತರು ಕಷ್ಟದಲ್ಲಿದ್ದಾರೆ. ಡಿಸಿಗಳಲ್ಲಿ ಪ್ರಶ್ನಿಸಿದರೆ ಸರ್ಕಾರ ಆದೇಶ, ಬೆಂಗಳೂರಿನಲ್ಲಿ ಬದಲಾವಣೆ ಮಾಡಿ ಎಂದು ಹೇಳುತ್ತಾರೆ. ವಿಧಾನಸೌಧಕ್ಕೆ ಬಂದರೂ ಸಮಸ್ಯೆ ಬಗೆಹರಿದಿಲ್ಲ.
ಅಧಿವೇಶನದಲ್ಲಿ ಈ ವಿಚಾರ ಚರ್ಚೆ ಆಗಬೇಕು ಎಂಬುದು ರೈತರ ಬೇಡಿಕೆಯಾಗಿದೆ. ರಾಗಿ ಖರೀದಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಸರ್ಕಾರ ತೆರೆದಿದೆ. ಈ ಹಿಂದೆ ರೈತ ಬೆಳೆದಷ್ಟು ರಾಗಿ ಮಾರಾಟಕ್ಕೆ ಅವಕಾಶ ಇತ್ತು. ಆದರೆ 2021 ರಲ್ಲಿ ಖರೀದಿಸಲ್ಪಟ್ಟ ರಾಗಿ 52 ಲಕ್ಷ ಕ್ವಿಂಟ್ವಾಲ್ ಮಾತ್ರ.
ಈ ಪೈಕಿ 4 ಲಕ್ಷ ಕ್ವಿಂಟ್ವಾಲ್ ನಷ್ಟು ಕಡೂರಿನಿಂದ ಖರೀದಿಯಾಗಿದೆ. ಆದರೆ ಈ ಬಾರಿ 20 ಲಕ್ಷ ಕ್ವಿಂಟ್ವಾಲ್ ಮಾತ್ರ ಖರೀದಿ ಮಾಡಲಾಗಿದೆ. 1,90,000 ಕ್ವಿಂಟ್ವಾಲ್ ಕಡೂರಿನಿಂದ ಖರೀದಿ ಮಾಡಿದೆ. ಇವಾಗ ರಾಗಿ ಖರೀದಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ.
ಸಣ್ಣ ರೈತರಿಂದ 20 ಕ್ವಿಂಟ್ವಾಲ್ ಮಾತ್ರ ಖರೀದಿ ಮಾಡುತ್ತೇವೆ ಎಂದು ಸರ್ಕಾರ ಆದೇಶ ಮಾಡಿದೆ. ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಹೀಗಾದರೆ ರೈತರು ಬೆಳೆದ ಉಳಿದ ರಾಗಿಯನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಕೂಡಲೇ ಸರ್ಕಾರದ ಆದೇಶವನ್ನು ಹಿಂಪಡೆಯಬೇಕು. ಆದೇಶದಲ್ಲಿ ಇರುವ ಸಣ್ಣ ಅತಿ ಸಣ್ಣ ರೈತರೆಂದ ಉಲ್ಲೇಖ ತೆಗೆದು ಹಾಕಬೇಕು. ರೈತರಲ್ಲಿ ಒಡಕು ಉಂಟು ಮಾಡಬಾರದು ಎಂದು ದತ್ತಾ ಮನವಿ ಮಾಡಿಕೊಂಡರು. ಕಡೂರು ತಾಲೂಕಿನ ರಾಗಿ ಬೆಳೆಗಾರರಿಂದ ಕಳೆದ ಬಾರಿಯತೆ ಗರಿಷ್ಠ 50 ಕ್ವಿಂಟ್ವಾಲ್ ಖರೀದಿ ಮಾಡಬೇಕು. 50 ರಿಂದ 20 ಕ್ಕೆ ಇಳಿಸಿದರೆ ಸಣ್ಣ ರೈತರಿಂದ ಮಾತ್ರವಲ್ಲದೆ ಎಲ್ಲರಿಂದ ಖರೀದಿಸಿ ಎಂದು ಆಗ್ರಹಿಸಿದ್ದಾರೆ.