2023ರ ಚುನಾವಣೆಗೆ ಜೆಡಿಎಸ್ ಸಿದ್ಧತೆ : ಇಂದಿನ ಕಾರ್ಯಾಗಾರ ಆರಂಭ

1 min read
JDS saaksha tv

ಚುನಾವಣೆ ಜೆಡಿಎಸ್ ಸಿದ್ಧತೆ : ಇಂದಿನ ಕಾರ್ಯಾಗಾರ ಆರಂಭ JDS saaksha tv

ಬೆಂಗಳೂರು : 2023ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷ ಇಂದಿನಿಂದಲೇ ತಯಾರಿ ಆರಂಭಿಸಿದೆ. 2023ರ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಮ್ಮ ನಿವಾಸದಲ್ಲಿ ನಾಲ್ಕು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ.

ಬಿಡದಿ ಹತ್ತಿರದ ಕೇತಗಾನಹಳ್ಳಿಯ ಹೆಚ್.ಡಿ. ಕುಮಾರಸ್ವಾಮಿ ಅವರ ತೋಟದಲ್ಲಿ ಜೆಡಿಎಸ್ ಕಾರ್ಯಾಗಾರ ಆರಂಭವಾಗಿದೆ.
ಜೆಡಿಎಸ್ ಕೋರ್ ಸಮಿತಿಯ ಸದಸ್ಯರು ದೀಪ ಬೆಳಗಿಸಿ, ಸಸಿಗಳಿಗೆ ನೀರು ಹಾಕುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು “ಪಕ್ಷ ಸಂಘಟನೆ ಮತ್ತು ಪಕ್ಷದ ಪರಂಪರೆ’ ಕುರಿತು ಮಾತನಾಡಿದ್ದಾರೆ.

ಇನ್ನು ಸೆಪ್ಟೆಂಬರ್ 28 ರಂದು “2023ರ ಸ್ವಂತ ಬಲದ ಸ್ವತಂತ್ರ ಸರ್ಕಾರ’ ವಿಷಯದ ಕುರಿತು ಎರಡನೇ ದಿನದ ಕಾರ್ಯಾಗಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಮುಖವಾಗಿ ಮಾತನಾಡಲಿದ್ದಾರೆ.

JDS saaksha tv

ನಂತರ “ಪಂಚರತ್ನ’ ಹಾಗೂ “ನಾಯಕನ ಆರೋಗ್ಯ’ ಎಂಬ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಧನಾತ್ಮಕ ರಾಜಕೀಯದ ಗುರುತೋರುವ ದಾರಿ’ ಎಂಬ ವಿಚಾರದ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಲಿದ್ದಾರೆ.

ಒಟ್ಟಾರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಇಂದಿನಿಂದಲೇ ತಯಾರಿ ಆರಂಭಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd