ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಕೋರಿದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್

1 min read

ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಕೋರಿದ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್

ಅಮೆರಿಕಾ : ಇಡೀ ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಮೆರಗು, ಎಲ್ಲಿ ನೋಡಿದ್ರು ಕಲರ್ ಫುಲ್ ಆದ ವಾತಾವರಣವಿದೆ. ಈ ನಡುವೆ ಗಣ್ಯರು , ಸ್ಟಾರ್ ಗಳು ದೇಶದ ಜನರಿಗೆ ದೀಪಾವಳಿ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್   ಅವರು ತಮ್ಮ ಮನೆಯಲ್ಲಿ ದೀಪ ಬೆಳಗುವ ಮೂಲಕ ವಿಶೇಷ ರೀತಿಯಲ್ಲಿ ಭಾರತೀಯರಿಗೆ ದೀಪಾವಳಿ ಹಬ್ಬದ ಶುಭಕೋರಿದ್ದಾರೆ.

“ದೀಪಾವಳಿಯಲ್ಲಿ ದೀಪ ಹಚ್ಚುವುದು ಕತ್ತಲಿನಿಂದ ಜ್ಞಾನ, ಅರಿವು, ಸತ್ಯದ ಬೆಳಕಿನ ಕಡೆಗೆ ಸಾಗುವ ಸಂಕೇತವಾಗಿದೆ. ವಿಭಜನೆಯಿಂದ ಏಕತೆ, ಹತಾಶೆಯಿಂದ ಭರವಸೆಯೆಡೆಗಿನ ತುಡಿತವಾಗಿದೆ” ಎಂದು ಬೈಡೆನ್‌ ಟ್ವೀಟ್‌ ಮಾಡಿ ವಿಶ್ ಮಾಡಿ ಭಾರರತೀಯರ ಮನಗೆದ್ದಿದ್ದಾರೆ. ಹಿಂದೂಗಳು, ಸಿಖ್‌ರು, ಜೈನರು, ಬೌದ್ಧರು ಅಮೆರಿಕ ಹಾಗೂ ವಿಶ್ವದಾದ್ಯಂತ ದೀಪಾವಳಿಯನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದಾರೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಅಭಿವೃದ್ಧಿಯಾಯ್ತು ಕೋವಿಡ್-19 ಮಾತ್ರೆ; ಮೊದಲ ರಾಷ್ಟ್ರವಾಗಿ ಯುಕೆ ಅನುಮೋದನೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd