ಇಂಗ್ಲೆಂಡ್‌ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ಜೋ ರೂಟ್

1 min read

ಇಂಗ್ಲೆಂಡ್‌ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ ಜೋ ರೂಟ್

ಇಂಗ್ಲೆಂಡ್‌ ತಂಡದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಜೋ ರೂಟ್ ತಮ್ಮ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲಸ್ಟೈರ್ ಕುಕ್ ನಾಯಕತ್ವದಿಂದ ಕೆಳಗಿಳಿದ ನಂತರ 2017 ರಲ್ಲಿ ಜೋ ರೂಟ್ ಇಂಗ್ಲೆಂಡ್ ತಂಡವನ್ನ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. 64 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದ ರೂಟ್ 27 ಬಾರಿ ತಂಡವನ್ನ ಗೆಲುವಿನಡೆಗೆ ಮುನ್ನಡೆಸಿದ್ದಾರೆ.

ಜೋ ರೂಟ್ ನಾಯಕತ್ವ ಕಳೆದ ಕೆಲವು ದಿನಗಳಿಂದ ಮೊನಚು ಕಳೆದುಕೊಂಡಿತ್ತು. ಅವರ ಯಾವುದೆ ತಂತ್ರಗಳು ಕೂಡ ವರ್ಕೌಟ್ ಆಗುತ್ತತಿಲ್ಲ.  ಕಳೆದ 17 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಸೋತ ಬಳಿಕ  ರೂಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ನಾನು ದೇಶಕ್ಕಾಗಿ ಆಡುವುದನ್ನು ಮುಂದುವರಿಸುತ್ತೇನೆ ಮತ್ತು ಮುಂದೆ ಬರುವ ನಾಯಕನಿಗೆ ಸಹಾಯ ಮಾಡಲು ಯಾವಾಗಲೂ ಸಿದ್ಧ ಎಂದು ರೂಟ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ  ಆಶಸ್ ಸರಣಿಯಲ್ಲಿ 0-4 ರಿಂದ ಸೋಲು ಅನುಭವಿಸಿದ ನಂತರ, ರೂಟ್ ಅವರನ್ನು ನಾಯಕತ್ವದಿಂದ ತೆಗೆದುಹಾಕಬೇಕೆಂಬ ಕೂಗು ಜೋರಾಗಿ ಕೇಳಿ ಬಂದಿತ್ತು. .ಇಂಗ್ಲೆಂಡ್‌ನ ಹಲವು ಮಾಜಿ ಆಟಗಾರರು ರೂಟ್ ನಾಯಕತ್ವವನ್ನು ಟೀಕಿಸಿದ್ದರು. ಆಶಸ್ ಸರಣಿಯ ಬಳಿಕ ವೆಸ್ಟ್ ಇಂಡೀಸ್ ಗೆ ತೆರಳಿದ್ದ ಆಂಗ್ಲರು 0-1 ಅಂತರದಲ್ಲಿ ಸರಣಿಯನ್ನ ಸೋತಿದ್ದರು. ಇದಾದ ನಂತರ ರೂಟ್ ಅವರ ಟೆಸ್ಟ್ ನಾಯಕತ್ವದ ವೃತ್ತಿಜೀವನ ಡೋಲಾಯಮಾನ ಪರಿಸ್ಥಿತಿಯಲ್ಲಿತ್ತು.

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಈ ವರ್ಷದ ಫೆಬ್ರವರಿಯಲ್ಲಿ ಕೋಚ್ ಕ್ರಿಸ್ ಸಿಲ್ವರ್‌ವುಡ್ ಅವರನ್ನ ವಜಾಗೊಳಿಸಿತ್ತು. ಆಶಸ್ ಸರಣಿ ಮತ್ತು 2021ರಲ್ಲಿ ತಂಡದ ಕಳಪೆ ಪ್ರದರ್ಶನವೂ ಇದಕ್ಕೆ ಕಾರಣ.

ಟೆಸ್ಟ್ ನಾಯಕತ್ವವನ್ನು ತೊರೆದ ನಂತರ ಮಾತನಾಡಿದ ಜೋ ರೂಟ್ ‘ವೆಸ್ಟ್ ಇಂಡೀಸ್‌ನಿಂದ ಹಿಂದಿರುಗಿದ ನಂತರ, ನಾನು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವವನ್ನು ತೊರೆಯಲು ಮನಸ್ಸು ಮಾಡಿದ್ದೆ. ಇದು ನನ್ನ ವೃತ್ತಿ ಜೀವನದಲ್ಲಿ ನಾನು ತೆಗೆದುಕೊಂಡ ಅತ್ಯಂತ ಕಠಿಣ ನಿರ್ಧಾರ. ಇದಕ್ಕಾಗಿ ನಾನು ನನ್ನ ಕುಟುಂಬ ಮತ್ತು ಆಪ್ತರೊಂದಿಗೆ ಮಾತನಾಡಿ ನಂತರ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾಯಕತ್ವದಿಂದ ಕೆಳಗಿಳಿಯಲು ಇದು ಸರಿಯಾದ ಸಮಯ ಎಂದು ನನಗೆ ತಿಳಿದಿದೆ. ನಾನು ನನ್ನ ದೇಶಕ್ಕಾಗಿ ಆಡಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ತಂಡದ ನಾಯಕನಾಗಿದ್ದೇನೆ, ಅದರ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಏನೇ ಮಾಡಿದರೂ ಅದು ನನಗೆ ಗೌರವ. ಎಂದು ಜೋ ರೂಟ್ ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd