Panch Parmeshwar: ದೆಹಲಿಯಲ್ಲಿ ಬಿಜೆಪಿಯಿಂದ ಪಂಚ ಪರಮೇಶ್ವರ ಸಮ್ಮೇಳನ…
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಪಂಚ ಪರಮೇಶ್ವರ ಸಮ್ಮೇಳನ’ವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶದಲ್ಲಿ ಒಂದು ಲಕ್ಷ ಪಕ್ಷದ ಕಾರ್ಯಕರ್ತರು ಸೇರಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ನಡೆಯುವ ಸಾಧ್ಯತೆಯಿರುವುದರಿಂದ ಈ ರ್ಯಾಲಿ ಮಹತ್ವ ಪಡೆದುಕೊಂಡಿದೆ. ಇಂದಿನ ರ್ಯಾಲಿಯನ್ನು ರಾಜಧಾನಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಎಂದು ಪರಿಗಣಿಸಲಾಗಿದೆ.
ದೆಹಲಿಯ ಪ್ರತಿ ಬೂತ್‌ನಿಂದ 5 ಬೂತ್ ಕಾರ್ಯಕರ್ತರು ಸ್ಥಳದಲ್ಲಿ ಹಾಜರಿರುತ್ತಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಹೇಳಿದ್ದಾರೆ. ಇಲ್ಲಿ ಒಟ್ಟು 13,000 ಬೂತ್‌ಗಳಿವೆ. ನಡ್ಡಾ ಅವರು ಮಾತನಾಡುವ ದೆಹಲಿಯಲ್ಲಿ ಇದು ಮೊದಲ ಪ್ರಮುಖ ಕಾರ್ಯಕ್ರಮವಾಗಿದೆ. ರ್ಯಾಲಿಯಲ್ಲಿ ಮೋದಿ ಸರ್ಕಾರದ ಸಾಧನೆಗಳು ಮತ್ತು ಆಮ್ ಆದ್ಮಿ ಪಕ್ಷದ ಲೋಪಗಳ ಬಗ್ಗೆ ಹೇಳುತ್ತೇವೆ.
ಮಹಾನಗರ ಪಾಲಿಕೆಬಿಜೆಪಿ 3 ಬಾರಿ ವಶಕ್ಕೆ
ಎಂಸಿಡಿ (ದೆಹಲಿ ಮುನ್ಸಿಪಲ್ ಕಾರ್ಪೊರೇಷನ್) ಸತತ 3 ಬಾರಿ ಬಿಜೆಪಿ ವಶಪಡಿಸಿಕೊಂಡಿದೆ. ಆದರೆ ಈ ಬಾರಿ ಎಎಪಿ ಬಿಜೆಪಿಗೆ ಪೈಪೋಟಿ ನೀಡುವಂತಿದೆ. ಏಪ್ರಿಲ್‌ನಲ್ಲಿ, ಎಂಸಿಡಿ ಚುನಾವಣೆಗಳನ್ನು ಘೋಷಿಸಲಾಯಿತು, ಆದರೆ ಪೂರ್ಣ ವೇಳಾಪಟ್ಟಿ ಬಿಡುಗಡೆಯಾಗುವ ಮೊದಲು ಅದನ್ನು ಮುಂದೂಡಲಾಯಿತು. ಕಾರಣ ಕೇಂದ್ರ ಸರ್ಕಾರ ಮೂರು ಪ್ರತ್ಯೇಕ ಮುನ್ಸಿಪಲ್ ಕಾರ್ಪೊರೇಷನ್ ಗಳನ್ನು ಒಂದುಗೂಡಿಸಲು ಬಯಸಿತ್ತು. ಈ ಹಿಂದೆ ದೆಹಲಿಯು ನಾರ್ತ್ ಎಂಸಿಡಿ, ಸೌತ್ ಎಂಸಿಡಿ ಮತ್ತು ಈಸ್ಟ್ ಎಂಸಿಡಿ ಹೊಂದಿದ್ದು, ಈಗ ಒಂದಾಗಿವೆ.
JP Nadda BJP Panch Parmeshwar Sammelan Over Delhi Nagar Nigam Election