ಜೂ. ಎನ್ ಟಿಆರ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಸದ್ಯ ಮತ್ತೆ ಪವನ್ ಕಲ್ಯಾಣ್ ಹಾಗೂ ಎನ್ ಟಿಆರ್ ಅಭಿಮಾನಿಗಳ ಮಧ್ಯೆ ವಾರ್ ಗೆ ಕಾರಣವಾಗಿದೆ.
ಪವನ್ ಕಲ್ಯಾಣ್ ಅಭಿಮಾನಿಗಳೇ ಎನ್ ಟಿಆರ್ ಅಭಿಮಾನಿಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಜೂ.ಎನ್ಟಿಆರ್ (Junior NT) ಗೆ ಅತಿ ಹೆಚ್ಚು ಅಭಿಮಾನಿ ಬಳಗವಿದೆ. ಎನ್ಟಿಆರ್ ಗ್ಲೋಬಲ್ ಸ್ಟಾರ್ ಎಂದು ಪವನ್ ಹೇಳಿದ್ದರು. ಇದರ ಬೆನ್ನಲ್ಲಿಯೇ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಇದು ಆತ್ಮಹತ್ಯೆ ಅಲ್ಲ, ಪವನ್ ಫ್ಯಾನ್ಸ್ (Fans) ಕೊಲೆ ಮಾಡಿದ್ದಾರೆ ಎಂದು ಎನ್ಟಿಆರ್ ಫ್ಯಾನ್ಸ್ ಆರೋಪಿಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದ ಶಾಮ್, ಪವನ್ಗಿಂತ ಎನ್ಟಿಆರ್ಗೆ ಹೆಚ್ಚು ಬಳಗ ಇದೆ ಎಂದು ಬರೆದುಕೊಂಡಿದ್ದರು. ಅದಕ್ಕೆ ಕೊಲೆ ಮಾಡಲಾಗಿದೆ ಎಂಬ ಆರೋಪ ಹಬ್ಬಿದೆ. ಸತ್ತಿರುವ ಎನ್ಟಿಆರ್ ಅಭಿಮಾನಿ ಕೊರಳಿನಲ್ಲಿ ಗಾಯದ ಗುರುತು, ಜೇಬಲ್ಲಿ ನಶೆ ಪದಾರ್ಥದ ಕವರ್ ಸಿಕ್ಕಿವೆ. ಆತ್ಮಹತ್ಯೆ ಎಂದು ಬಿಂಬಿಸಲು ಹೀಗೆ ಮಾಡಿದ್ದಾರೆ ಎಂದು ಫ್ಯಾನ್ಸ್ ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಹೀರೋಗಳ ಹೆಸರಿನಲ್ಲಿ ಫ್ಯಾನ್ಸ್ ಗಳು ಕಿತ್ತಾಡುವುದು ಸಾಮಾನ್ಯವಾಗುತ್ತಿದೆ.






