ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ (Darshan) ಮತ್ತು ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನ (Judicial Custody) ಅವಧಿ ಸೆ. 17ರ ವರೆಗೆ ವಿಸ್ತರಿಸಲಾಗಿದೆ.
ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದರು.
ಪವಿತ್ರಾ ಗೌಡ, ದರ್ಶರ್ನ್ ಸೇರಿದಂತೆ ಎಲ್ಲಾ ಆರೋಪಿಗಳ ಹೆಸರನ್ನು ನ್ಯಾಯಾಧೀಶರು ಕರೆದಾಗ ಆರೋಪಿಗಳು ಎಸ್ ಸರ್ ಎಂದು ಹೇಳಿ ವಿಚಾರಣೆಗೆ ಹಾಜರಾಗಿರುವುದನ್ನು ದೃಢೀಕರಿಸಿದರು.
ಈ ಸಂದರ್ಭದಲ್ಲಿ ಸಂಪೂರ್ಣ ಚಾರ್ಜ್ಶೀಟ್ ನೀಡಬೇಕು. ಎಲೆಕ್ಟ್ರಾನಿಕ್ಸ್ ಸಾಕ್ಷ್ಯಗಳನ್ನು ಒಂದು ವಾರದಲ್ಲಿ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದರು. ಆದರೆ, ಇದುವರೆಗೂ ನೀಡಿಲ್ಲ ಎಂದು ಆರೋಪಿಗಳ ಪರ ವಕೀಲರು ಕೋರ್ಟ್ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಕೋರ್ಟ್, ಆರೋಪಿಗಳಿಗೆ ಸೆ. 17ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿದರು.